ಉತ್ತರ ಪ್ರದೇಶದಲ್ಲಿರುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದೀಪಗಳ ಹಬ್ಬಕ್ಕೂ ಮುನ್ನ ಲಲಿತ ಅಕಾಡೆಮಿ ಜನ್ ಜಾನ್ ಕೆ ರಾಮ್ ಎಂಬ ಶೀರ್ಷಿಕೆಯಡಿಯಲ್ಲಿ 25 ರಾಮನ ಪ್ರತಿಮೆಗಳನ್ನ ಪ್ರದರ್ಶಿಸಲಿದೆ.
ಅಯೋಧ್ಯೆಯ ಲಕ್ಷ್ಮಣಪುರದಲ್ಲಿ ನಿರ್ಮಿಸಲಾಗಿರುವ ಭಗವಾನ್ ಶ್ರೀರಾಮನ ವಿಶಿಷ್ಟವಾದ ವಿಗ್ರಹಗಳು ರಾಮ ಭಕ್ತರನ್ನ ಆಕರ್ಷಿಸುತ್ತಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಈ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಾಮ ಕಥಾ ಉದ್ಯಾನವನದಲ್ಲಿ ಈ ಪ್ರದರ್ಶನ ನಡೆಯಲಿದ್ದು, ಕಾನ್ಪುರ, ಬನಾರಸ್, ಪ್ರಯಾಗರಾಜ್, ಮಥುರಾ, ಲಕ್ನೋದ ಶಿಲ್ಪಿಗಳು ತಯಾರಿಸಿದ ರಾಮನ ಅಪ್ರತಿಮ ಪ್ರತಿಮೆಗಳನ್ನ ಸದ್ಯದಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ.