ಭಾರತವು ಈಗಾಗಲೇ 15 ದೇಶಗಳಿಗೆ ಕೊರೊನಾ ಲಸಿಕೆಗಳನ್ನ ವಿತರಣೆ ಮಾಡಿದ್ದು, ದೇಶೀ ಲಸಿಕೆಗಾಗಿ ಇನ್ನೂ 25 ರಾಷ್ಟ್ರಗಳು ಸರದಿಯಲ್ಲಿ ಇವೆ ಎಂದು ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಭಾರತದಿಂದ ಕೊರೊನಾ ಲಸಿಕೆಗಾಗಿ ಮೂರು ವರ್ಗದ ರಾಷ್ಟ್ರಗಳು ಬೇಡಿಕೆ ಇಟ್ಟಿವೆ. ಬಡ, ಬೆಲೆಯ ಬಗ್ಗೆ ಹೆಚ್ಚು ಗಮನ ಕೊಡುವ ರಾಷ್ಟ್ರಗಳು ಹಾಗೂ ಲಸಿಕೆ ತಯಾರಕ ಕಂಪನಿಗಳ ಜೊತೆ ಒಪ್ಪಂದಕ್ಕೆ ತಯಾರಿರುವ ರಾಷ್ಟ್ರಗಳು ಹೀಗೆ ಮೂರು ವರ್ಗದ ರಾಷ್ಟ್ರಗಳಿಂದ ಲಸಿಕೆಗೆ ಬೇಡಿಕೆ ಇಡಲಾಗಿದೆ ಎಂದು ಹೇಳಿದ್ರು.
ನನ್ನ ಪ್ರಕಾರ ನಾವು ಈಗಾಗಲೇ 15 ದೇಶಗಳಿಗೆ ಲಸಿಕೆ ಪೂರೈಕೆ ಮಾಡಿದ್ದೇವೆ. ಇನ್ನೂ 25 ರಾಷ್ಟ್ರಗಳು ಭಾರತದ ಲಸಿಕೆಗಾಗಿ ಸರದಿಯಲ್ಲಿವೆ. ಆದರೆ ನಾವು ಮಾಡಿರುವ ಕಾರ್ಯ ನಮ್ಮನ್ನ ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದು ಜೈ ಶಂಕರ್ ಹೇಳಿದ್ದಾರೆ.