ಜೂನ್ 21 ಅಂದರೆ ಭಾನುವಾರ ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವು ಸಂತಸದ ದಿನವಾದರೆ ಮಯಾನ್ ನಾಗರಿಕತೆಯ ಪ್ರಕಾರ ಈ ಭಾನುವಾರ ಜಗತ್ತಿನ ಪ್ರಳಯದ ದಿನವಂತೆ.
ಹೌದು, ಕಂಕಣ ಸೂರ್ಯಗ್ರಹಣ, ಫಾದರ್ಸ್ ಡೇ, ವಿಶ್ವ ಸಂಗೀತ ದಿನ, ವಿಶ್ವ ಯೋಗ ದಿನದೊಂದಿಗೆ ಮಯಾನ್ ಕ್ಯಾಲೆಂಡರ್ ಪ್ರಕಾರ ಜೂ 21 ಅಂತ್ಯದ ದಿನವಂತೆ.
ಮಯಾನ್ ಕ್ಯಾಲೆಂಡರ್ ಪ್ರಕಾರ ಜಗತ್ತಿನ ಪ್ರಳಯದ ದಿನವೆಂದು ಹೇಳಲಾಗಿದ್ದು, ಇದಕ್ಕೆ ಪೂರಕ ಎನ್ನುವ ರೀತಿಯಲ್ಲಿ ವಿಶ್ವದಲ್ಲಿ ಕೊರೋನಾ ಅಟ್ಟಹಾಸ ನಡೆಸಿದೆ. ಇದರೊಂದಿಗೆ ಚೀನಾ – ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಈ ಸಂಕಷ್ಟದ ನಡುವೆ ಭಾನುವಾರ ಸುದೀರ್ಘ ಸೂರ್ಯಗ್ರಹಣಕ್ಕೂ ವಿಶ್ವ ಸಾಕ್ಷಿಯಾಗಿದೆ.
ಈ ಎಲ್ಲ ನಕಾರಾತ್ಮಕ ಅಂಶಗಳೊಂದಿಗೆ ಅಪ್ಪಂದಿರ ದಿನ, ಯೋಗ ದಿನ ಹಾಗೂ ಸಂಗೀತ ದಿನವನ್ನು ವಿಶ್ವಾದ್ಯಂತ ಮನೆಯಲ್ಲೇ ಕುಳಿತು ಆಚರಿಸಿದ್ದಾರೆ. ಈ ಎಲ್ಲದರೊಂದಿಗೆ ಇಂದು ಭೂಮಿ ಸೂರ್ಯನತ್ತ ಹೆಚ್ಚು ಬಾಗಿರುವ ದಿನವೆಂದು ವಿಶ್ಲೇಷಕರು ಹೇಳಿದ್ದು, ಉತ್ತರ ದೃವ ಸೂರ್ಯನತ್ತ ವಾಲಿದೆ.