ದೇಶದಲ್ಲಿ ನೋಟು ನಿಷೇಧದ ನಂತ್ರ ನಕಲಿ ಕರೆನ್ಸಿ ಮತ್ತು ಕಪ್ಪು ಹಣಕ್ಕೆ ಅಂತ್ಯ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ ಇದು ಸುಳ್ಳಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳಲ್ಲಿ 2000 ನೋಟುಗಳ ಸಂಖ್ಯೆ ಹೆಚ್ಚಿದೆ.
ವರದಿಯ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಿದ ಮಾಹಿತಿಯು 2018 ಕ್ಕೆ ಹೋಲಿಸಿದರೆ 2019 ರಲ್ಲಿ ಅತಿ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019 ರಲ್ಲಿ ದೇಶದಲ್ಲಿ ಒಟ್ಟು 25.39 ಕೋಟಿ ನಕಲಿ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ 2018 ರಲ್ಲಿ ಈ ಸಂಖ್ಯೆ ಕೇವಲ 17.95 ಕೋಟಿ. ಸರ್ಕಾರದ ಅಂಕಿ ಅಂಶಗಳ ಪ್ರಕಾರ, 2019 ರಲ್ಲಿ 2000 ದ ಒಟ್ಟು 90566 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ನವೆಂಬರ್ 8, 2016ರಲ್ಲಿ 500 ಹಾಗೂ ಸಾವಿರ ರೂಪಾಯಿ ನೋಟುಗಳನ್ನು ನಿಷೇಧಿಸಲಾಗಿತ್ತು. ಈ ನಂತ್ರ ನಕಲಿ ನೋಟುಗಳ ಹಾವಳಿಗೆ ಅಂತ್ಯ ಬೀಳಲಿದೆ ಎನ್ನಲಾಗಿತ್ತು. ಆದ್ರೆ ನಾಲ್ಕು ವರ್ಷಗಳ ನಂತ್ರ ದೇಶದ ಚಿತ್ರಣ ಮತ್ತೆ ಮೊದಲಿನಂತಾಗಿದೆ.