ಭಗವಂತ ಮಹಾವಿಷ್ಣುವಿನ ಸ್ವಯಂ ಅವತಾರಿ ಎಂಟು ದೇಗುಲಗಳಲ್ಲಿ ಒಂದಾದ ಶ್ರೀರಂಗಂನ ರಂಗನಾಥಸ್ವಾಮಿ ದೇಗುಲವು ಮಹಾವಿಷ್ಣುವಿನ 108 ದೇಗುಲಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ನಂಬಲಾಗಿದೆ.
ದೇವಸ್ಥಾನದ ಸಂಗ್ರಹಾಲಯದಲ್ಲಿರುವ ತಾಳೆಗರಿಗಳು 200-300 ವರ್ಷದಷ್ಟು ಹಳೆಯದಾಗಿದ್ದು, ಇವುಗಳನ್ನು ಡಿಜಿಟಲೀಕರಣಗೊಳಿಸಲು ದೇವಸ್ಥಾನದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ಈ ತಾಳೆಗರಿ ಲಿಪಿ ತಮಿಳು ಹಾಗೂ ತೆಲುಗಿನಲ್ಲಿವೆ.
ಶಬ್ದ ಮಾಲಿನ್ಯ ಮಾಡಿದ್ರೆ ಈ ರಾಜ್ಯದಲ್ಲಿ ವಿಧಿಸಲಾಗುತ್ತೆ ಭಾರೀ ದಂಡ…..!
ದೇವಸ್ಥಾನದ ಸಂಗ್ರಹಲಾಯದಲ್ಲಿ ತಾಳೆ ಗರಿಗಳ ಆರು ಸೆಟ್‌ಗಳನ್ನು ಸಾರ್ವಜನಿಕ ದರ್ಶನಕ್ಕೆಂದು ಇಡಲಾಗಿದೆ. ’ಸುಂದರಕಾಂಡ’, ’ಭಾಗವತ’, ’ಶ್ರೀ ಭಾಗವತ’, ’ಪೆರಿಯಳ್ವಾರ್ ತಿರುಮೋಳಿ ವ್ಯಾಕನಂ’ ಹಾಗೂ ’ತುಲಾ ಕಾವೇರಿ’ ಎಂದು ಈ ತಾಳೆಗರಿಗಳಿಗೆ ಹೆಸರಿಡಲಾಗಿದೆ.
ಯಾರಿಗೆ ಸಿಗಲಿದೆ ‘ಪಿಎಂ ಕಿಸಾನ್ ಸಮ್ಮಾನ್’ ಯೋಜನೆ ಲಾಭ…..? ಇಲ್ಲಿದೆ ಅದರ ಮಾಹಿತಿ
ಸುಂದರಕಾಂಡವು ಶ್ರೀರಾಮಚಂದ್ರರ ಬದುಕಿನ ಬಗ್ಗೆ ಮಾತನಾಡಿದರೆ; ಭಾಗವತಂ ವಿಷ್ಣುವಿನ ಹತ್ತು ಅವತಾರಗಳ ಕುರಿತ ವಿವರಣೆ ಹೊಂದಿದ್ದು; ಪೆರಿಯಾಳ್ವಾರ್ ತಿರುಮೋಳಿ ವ್ಯಾಕ್ಯಾನಂನಲ್ಲಿ ವಿಷ್ಣುವಿನ ಧಾರ್ಮಿಕ ನಂಬಿಕೆಗಳು ಹಾಗೂ ತುಲಾ ಕಾವೇರಿಯಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಯಾವ ಸಮಯ ಒಳ್ಳೆಯದು ಎಂಬುದರ ಬಗ್ಗೆ ವ್ಯಾಖ್ಯಾನಗಳಿವೆ.