
ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ರೈತರು ಅನುಮತಿ ಕೇಳಿದ್ದರು. ಬಳಿಕ ಈ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು.
ಈ ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಮಹಿಳಾ ಪೊಲೀಸರು…!
ಇದಾದ ಬಳಿಕ ದೆಹಲಿಯಲ್ಲಿ 200 ಮಂದಿ ಪೊಲೀಸರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಫ್ಯಾಕ್ಟ್ ಚೆಕ್ನಲ್ಲಿ ಈ ಸುದ್ದಿಯ ಅಸಲಿ ಸತ್ಯ ಬಯಲಾಗಿದೆ.
ಪಿಐಬಿ ಫ್ಯಾಕ್ಟ್ ಚೆಕ್ ನಡೆಸಿದ ಸಮೀಕ್ಷೆಯಲ್ಲಿ 200 ಮಂದಿ ದೆಹಲಿ ಪೊಲೀಸರು ರಾಜೀನಾಮೆ ನೀಡುತ್ತಿದ್ದಾರೆ ಎಂಬ ವಿಚಾರ ಸುಳ್ಳು ಎಂದು ತಿಳಿದು ಬಂದಿದೆ.