ಬೃಹತ್ ಕುಂಭಮೇಳ ಪ್ರತಿಯೊಬ್ಬ ಹಿಂದೂ ಸಂತರು ಕಾದು ಕುಳಿತಿರುತ್ತಾರೆ. ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗೋಕೆ ಅಂತಾನೇ ದೇಶದ ಮೂಲೆ ಮೂಲೆಗಳಿಂದ ಹರಿದ್ವಾರಕ್ಕೆ ಆಗಮಿಸ್ತಾರೆ.
ಕುತ್ತಿಗೆಗೆ ರುದ್ರಾಕ್ಷಿ ಮಾಲೆ, ಖಾವಿ ಬಟ್ಟೆಯ ಮೂಲಕವೇ ಸಾಧು ಸಂತರು ಹೆಚ್ಚಿನವರ ಗಮನವನ್ನ ಸೆಳೆಯುವಲ್ಲಿ ಯಶಸ್ವಿಯಾಗ್ತಾರೆ. ಅದರಲ್ಲಿ ನಾಗ ಸಾಧು ಎಂದೇ ಫೇಮಸ್ ಆಗಿರುವ ನಾರಾಯಣ್ ನಂದಗಿರಿ ಮಹರಾಜ್ ತಮ್ಮ ವಿಶೇಷ ರೀತಿಯ ದೇಹ ರಚನೆ ಮೂಲಕವೇ ಎಲ್ಲ ಗಮನ ಸೆಳೀತಿದ್ದಾರೆ. ಇವರ ಎತ್ತರ ಕೇವಲ 18 ಇಂಚು ಇದ್ದು ದೇಹದ ತೂಕ ಸರಿ ಸುಮಾರು 18 ಕೆಜಿ ಇದೆ.
ವಿಶ್ವದ ಬಹುತೇಕ ಧಾರ್ಮಿಕ ಕೂಟದಲ್ಲಿ ಭಾಗಿಯಾಗುವ ಅತಿ ಚಿಕ್ಕ ಸಂತ ಎಂಬ ಖ್ಯಾತಿ ಇವರಿಗಿದೆ. 55 ವರ್ಷದ ಈ ಸಾಧುಗೆ ಸ್ವಂತಬಲದಿಂದ ನಿಲ್ಲಲು ಹಾಗೂ ಓಡಾಡಲು ಬರೋದಿಲ್ಲ. ಇವರ ಶಿಷ್ಯ ಉಮೇಶ್ ಸಾಧುವಿನ ಯೋಗ ಕ್ಷೇಮ ನೋಡಿಕೊಳ್ತಾರೆ. ನಂದಗಿರಿ ಮಹರಾಜ್ ದೇವಸ್ಥಾನದ ಮುಂದೆಯೇ ಕುಳಿತುಕೊಳ್ತಾರೆ. ಇವರ ಬಳಿ ಆಶೀರ್ವಾದ ಪಡೆಯಲು ಭಕ್ತರ ದಂಡೇ ಹರಿದುಬರುತ್ತೆ.