ಗುಜರಾತ್ನ ವಲ್ಸಾದ್ ಜಿಲ್ಲೆಯ ಮಾಲ್ವಾನ್ ಎಂಬಲ್ಲಿರುವ ನರ್ಗೋಲ್ ಬೀಚ್ನಲ್ಲಿ ಬರೋಬ್ಬರಿ 18 ಅಡಿ ಉದ್ದದ ತಿಮಿಂಗಲದ ಮೃತದೇಹ ಪತ್ತೆಯಾಗಿದೆ.
ಮೀನಿನ ಮೃತದೇಹವು ಸಂಪೂರ್ಣ ಕೊಳೆತು ಹೋಗಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಮಿಂಗಲದ ಪ್ರಬೇಧವನ್ನ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಮೃತದೇಹದ ಮಾದರಿ ಸಂಗ್ರಹಿಸಿದ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಸ್ಥಳೀಯರು ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ರು. ಇಲ್ಲಿಯವರೆಗೆ ತಿಮಿಂಗಲದ ಮೃತದೇಹವನ್ನ ರವಾನೆ ಮಾಡಲಾಗಿಲ್ಲ.
ಇನ್ನು ಈ ವಿಚಾರವಾಗಿ ಮಾತನಾಡಿದ ಉಪ ಸಂರಕ್ಷಣಾಧಿಕಾರಿ ಯಾದು ಭಾರದ್ವಾಜ್, ತಿಮಿಂಗಿಲ ಆಕಸ್ಮಿಕವಾಗಿ ಸಾವನ್ನಪ್ಪಿದೆಯೇ ಅನ್ನೋದು ಪರೀಕ್ಷೆ ಬಳಿಕ ಬಹಿರಂಗವಾಗಲಿದೆ ಎಂದು ಹೇಳಿದ್ರು. ಬಹುಶಃ ಈ ತಿಮಿಂಗಲವು ಬಹಳ ದಿನದ ಹಿಂದೆಯೇ ಸಾವಿಗೀಡಾಗಿದ್ದಿರಬಹುದು ಎಂದು ಇನ್ನೊಬ್ಬ ಅಧಿಕಾರಿ ಮಾಹಿತಿ ನೀಡಿದ್ರು.
ತಿಮಿಂಗಲದ ಮೃತದೇಹವನ್ನ ನೋಡಲು ಸ್ಥಳಕ್ಕೆ ಜನರ ಸಮೂಹವೇ ಜಮಾಯಿಸಿತ್ತು. ಭಾರತದ ವನ್ಯಜೀವಿ ಕಾಯ್ದೆ 1972ರ ಪ್ರಕಾರ ತಿಮಿಂಗಿಲಗಳನ್ನ ಅಳಿವಿನಂಚಿನ ಪ್ರಬೇಧಕ್ಕೆ ಸೇರಿಸಲಾಗಿದೆ.