ಮಹಾರಾಷ್ಟ್ರದಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ತಂದೆ ಹಾಗೂ ಪ್ರೇಮಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.ಬಾಲಕಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ರಸ್ತೆ ಬಳಿ ಸತ್ತ ಭ್ರೂಣ ಸಿಕ್ಕಿತ್ತು. ತನಿಖೆ ವೇಳೆ ಪೀಡಿತೆ ಪೊಲೀಸ್ ಕೈಗೆ ಸಿಕ್ಕಿದ್ದಾಳೆ. ಈ ವೇಳೆ ತಂದೆ ಹಾಗೂ ಬಾಯ್ ಫ್ರೆಂಡ್ ಅತ್ಯಾಚಾರವೆಸಗಿದ್ದಾರೆಂದು ಬಾಯ್ಬಿಟ್ಟಿದ್ದಾಳೆ. ತಂದೆ ಹಾಗೂ ಬಾಯ್ ಫ್ರೆಂಡ್ ಅನೇಕ ಬಾರಿ ಅತ್ಯಾಚಾರವೆಸಗಿದ್ದಾರೆಂದು ಆಕೆ ಹೇಳಿದ್ದಾಳೆ.
51 ವರ್ಷದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವಕ ಪಕ್ಕದ ಮನೆಯಲ್ಲಿ ವಾಸವಾಗಿದ್ದನಂತೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ. ಈ ವಿಷ್ಯ ತಿಳಿದ ಮನೆಯವರು ಹುಡುಗಿ ಮನೆ ಬದಲಿಸಿದ್ದರಂತೆ. ಆದ್ರೂ ಇಬ್ಬರ ಮಧ್ಯೆ ಸಂಬಂಧ ಮುಂದುವರೆದಿತ್ತಂತೆ. ಅಗತ್ಯ ಬಿದ್ದರೆ ಡಿ ಎನ್ ಎ ಪರೀಕ್ಷೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.