ಮಾಲಿನ್ಯ, ಭ್ರಷ್ಟಾಚಾರ ಹಾಗೂ ಅಸಮಾನತೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ನೂಗ್ತಿದೆ. ಸಾಮಾಜಿಕ ಪಿಡುಗಗಳಿಂದ ಚಿಂತೆಗೊಳಗಾಗಿದ್ದ 16 ವರ್ಷದ ಹುಡುಗಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದ ನಂತ್ರ ಹುಡುಗಿ ತಲೆಗೆ ಗುಂಡು ಹಾರಿಸಿಕೊಂಡಿದ್ದಾಳೆ. ಸ್ವಾತಂತ್ರ್ಯ ದಿನಕ್ಕೆ ಒಂದು ದಿನ ಮೊದಲು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉತ್ತರ ಪ್ರದೇಶದ ಸಂಭಾಲ್ನಲ್ಲಿ ಘಟನೆ ನಡೆದಿದೆ.
ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ಹುಡುಗಿ 18 ಪುಟಗಳ ಡೆತ್ ನೋಟ್ ಬರೆದಿದ್ದಾಳೆ. ಅದ್ರಲ್ಲಿ ಪಿಎಂ ಭೇಟಿ ಇಚ್ಛೆ ವ್ಯಕ್ತಪಡಿಸಿದ್ದಾಳೆ. ಜನಸಂಖ್ಯೆ ನಿಯಂತ್ರಣ, ಪಟಾಕಿ ನಿಷೇಧ ಹಾಗೂ ಹೋಳಿಯಲ್ಲಿ ನೈಸರ್ಗಿಕ ಬಣ್ಣ ಬಳಕೆ ಸೇರಿದಂತೆ ಅನೇಕ ವಿನಂತಿ ಮಾಡಿದ್ದಾಳೆ. ಬಾಲಕಿ ಅನೇಕ ದಿನಗಳಿಂದ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಳಂತೆ.