ಚಂದ್ರನ ಸಾಕಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುತ್ತದೆ. ಅದೇ ರೀತಿ ರೆಡಿಟ್ನಲ್ಲಿ ಚಂದ್ರನ ಫೋಟೋಗಳು ವೈರಲ್ ಆಗಿದ್ದು, ಇವುಗಳು ಈವರೆಗಿನ ಅತ್ಯಂತ ಸ್ಪಷ್ಟ ಚಂದ್ರನ ಚಿತ್ರ ಎಂದು ಬಣ್ಣಿಸಲಾಗಿದೆ. ಪುಣೆಯ 16 ವರ್ಷದ ಪ್ರಥಮೇಶ್ ಜಾಜು ಎಂಬವರು ಕ್ಲಿಕ್ಕಿಸಿದ ಫೋಟೋ ಇದಾಗಿದ್ದು 186 ಗಿಗಾಬೈಟ್ ಸಾಮರ್ಥ್ಯ ಹೊಂದಿದೆ.
ಕಮೆಂಟ್ ವಿಭಾಗದಲ್ಲಿ ಜಾಜು ತಾನು ಹೇಗೆ ಫೋಟೋ ಕ್ಲಿಕ್ಕಿಸಿದೆ ಎಂಬುದನ್ನ ವಿವರಿಸಿದ್ದಾರೆ. ಇದು ನಾನು ಈವರೆಗೆ ತೆಗೆದ ಅತ್ಯಂತ ಸ್ಪಷ್ಟವಾದ ಚಂದ್ರನ ಫೋಟೋವಾಗಿದೆ. ನಾನು 186 ಗಿಗಾಬೈಟ್ಸ್ ಸಾಮರ್ಥ್ಯದ 50 ಸಾವಿರಕ್ಕೂ ಹೆಚ್ಚು ಫೋಟೋಗಳನ್ನ ಕ್ಲಿಕ್ಕಿಸಿದೆ ಎಂದು ಹೇಳಿದ್ದಾರೆ.
ನಾನು ಮೊದಲು ಚಂದ್ರನ ಸಣ್ಣ ಸಣ್ಣ ಪ್ರದೇಶಗಳ ವಿಡಿಯೋಗಳನ್ನ ಮಾಡಿದೆ. ಪ್ರತಿಯೊಂದು ವಿಡಿಯೋ 2000 ಫ್ರೇಮ್ಗಳನ್ನ ಹೊಂದಿತ್ತು. ಈ ಎಲ್ಲಾ ವಿಡಿಯೋಗಳನ್ನ ಸೇರಿಸಿ 1 ಫೋಟೋವನ್ನ ಮಾಡಲಾಯ್ತು. ಸುಮಾರು 38 ವಿಡಿಯೋಗಳನ್ನ ನಾನು ತೆಗೆದುಕೊಂಡೆ. ಇದೀಗ ನನ್ನ 38 ಫೋಟೋಗಳಿವೆ ಎಂದು ವಿವರಿಸಿದ್ದಾರೆ.
ಚಂದ್ರನ ಬಣ್ಣ ಈ ಫೋಟೋದಲ್ಲಿ ಕೊಂಚ ಭಿನ್ನವಾಗಿ ಕಂಡಿದೆ. ಜಾಜು ಅವರ ಪ್ರಕಾರ ಬಣ್ಣಗಳು ಚಂದ್ರನ ಮೇಲೆ ಖನಿಜಗಳನ್ನ ತೋರಿಸುತ್ತದೆ ಎಂದು ಹೇಳಿದ್ದಾರೆ.
https://www.instagram.com/p/COiTQQSJZy8/?utm_source=ig_web_copy_link