ಉತ್ತರ ಪ್ರದೇಶದ ಬಲಿಯಾದಲ್ಲಿ 16 ವರ್ಷದ ಹುಡುಗಿ ಬ್ಯಾಂಕ್ ಖಾತೆಗೆ ಕೋಟ್ಯಾಂತರ ರೂಪಾಯಿ ವರ್ಗಾವಣೆಯಾಗಿದೆ.
ಆದ್ರೆ ಈ ವಿಷ್ಯ ಹುಡುಗಿಗೆ ಗೊತ್ತಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ಹುಡುಗಿ ಯಾವುದೋ ಕೆಲಸಕ್ಕೆಂದು ಬ್ಯಾಂಕ್ ಗೆ ಹೋಗಿದ್ದಳಂತೆ. ಅಲ್ಲಿ ತನ್ನ ಬ್ಯಾಂಕ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡಿದ್ದಾಳೆ. ಆಗ ಅಲಹಾಬಾದ್ ಬ್ಯಾಂಕ್ ಖಾತೆಯಲ್ಲಿ 9 ಕೋಟಿ 99 ಲಕ್ಷ 4 ಸಾವಿರದ 736 ರೂಪಾಯಿ ಇರುವುದು ಗೊತ್ತಾಗಿದೆ. ಈ ವಿಷ್ಯ ಬ್ಯಾಂಕ್ ನವರಿಗೆ ಗೊತ್ತಾಗ್ತಿದ್ದಂತೆ ಖಾತೆ ವ್ಯವಹಾರವನ್ನು ಬಂದ್ ಮಾಡಿದ್ದಾರೆ.
ಪೊಲೀಸರು ಬಂದು ವಿಚಾರಿಸಿದಾಗ ಹುಡುಗಿ ತನಗೆ ಗೊತ್ತಿಲ್ಲ ಎಂದಿದ್ದಾಳೆ. 2018ರಲ್ಲಿ ಖಾತೆ ತೆರೆಯಲಾಗಿತ್ತಂತೆ. ನಿಲೇಶ್ ಎಂಬ ವ್ಯಕ್ತಿ ಪಿಎಂ ಆವಾಸ್ ನೀಡುವುದಾಗಿ ಹೇಳಿ ಆಧಾರ್ ನಂಬರ್ ಪಡೆದಿದ್ದನಂತೆ. ಕೆಲವು ಕಡೆ ಸಹಿ ತೆಗೆದುಕೊಂಡಿದ್ದನಂತೆ. ಹುಡುಗಿ ಸರೋಜಾ ಹೆಚ್ಚು ಕಲಿತಿಲ್ಲ. ಸಹಿ ಹಾಕಲು ಮಾತ್ರ ಬರುತ್ತೆ ಎಂದು ಪೊಲೀಸರು ಹೇಳಿದ್ದಾರೆ. ಅನೇಕ ಬಾರಿ ಸರೋಜಾ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ನಿಲೇಶ್ ಸದ್ಯ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ.