ಕೊರೊನಾ ಲಸಿಕೆ ಪಡೆದ ಬಳಿಕವೂ ಸೋಂಕಿಗೆ ಒಳಗಾದ ಕನಿಷ್ಟ 15 ಪ್ರಕರಣಗಳು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದ ಬಳಿಕವು ಕೆಲ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸಮಾಧಾನಕಾರ ವಿಚಾರ ಅಂದರೆ ಈ ಎಲ್ಲರಲ್ಲೂ ಸೌಮ್ಯ ರೀತಿಯಲ್ಲಿ ಲಕ್ಷಣಗಳು ಕಾಣಿಸಿಕೊಂಡಿವೆ.
ಸದ್ಯಕ್ಕೆ ಇರುವ ಮಾಹಿತಿಯ ಪ್ರಕಾರ ಕಡಿಮೆ ಅಂದ್ರುನೂ 15 ಮಂದಿ ಲಸಿಕೆ ಸ್ವೀಕರಿಸಿದ ಬಳಿಕವೂ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಆತಂಕ ಪಡುವ ವಿಚಾರ ಏನಿಲ್ಲ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶಕ ಡಾ. ಜಿ. ಶ್ರೀನಿವಾಸ್ ರಾವ್ ಹೇಳಿದ್ರು.
ದೇಶದಲ್ಲಿ ಸದ್ಯ ನೀಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಸೋಂಕಿನ ವಿರುದ್ಧ 70 – 81 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿವೆ. 20 -30 ಪ್ರತಿಶತ ಜನರು ಲಸಿಕೆ ಪಡೆದ ಬಳಿಕವೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಿದ್ರು.