ಉತ್ತರಾಖಂಡದ ಹಲ್ದ್ವಾನಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಲತಾಯಿ ವಿರುದ್ಧ ಅಪ್ರಾಪ್ತ ಬಾಲಕ ದೂರು ನೀಡಿದ್ದಾನೆ. ಅಪ್ರಾಪ್ತ ಬಾಲಕನಿಗೆ ಮಲತಾಯಿ ಲೈಂಗಿಕ ಕಿರುಕುಳ ನೀಡಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಬಾಲಕನ ತಾಯಿ ಸಾವನ್ನಪ್ಪಿದ್ದಳು. 6 ತಿಂಗಳ ಹಿಂದೆ ತಂದೆ ಇನ್ನೊಂದು ಮದುವೆಯಾಗಿದ್ದ. ಕೆಲ ದಿನಗಳ ಹಿಂದೆ ಪತಿ-ಪತ್ನಿ ಮಧ್ಯೆ ಗಲಾಟೆ ನಡೆದು ಪತ್ನಿ, ಕಿರುಕುಳ ದೂರು ನೀಡಿ ತವರು ಸೇರಿದ್ದಳು. ಮಲತಾಯಿ ಮನೆಯಿಂದ ಹೊರಗೆ ಹೋದ್ಮೇಲೆ 14 ವರ್ಷದ ಅಪ್ರಾಪ್ತ ತಂದೆಗೆ ವಿಷ್ಯ ತಿಳಿಸಿದ್ದಾನೆ.
ಕಳೆದ ಎರಡು ತಿಂಗಳಿಂದ ತಾಯಿ ಶಾರೀರಿಕ ಸಂಬಂಧ ಬೆಳೆಸಲು ಒತ್ತಾಯ ಮಾಡ್ತಿದ್ದಳು. ಬೆದರಿಸಿ ತನ್ನ ಜೊತೆ ಅನೇಕ ಬಾರಿ ಸಂಬಂಧ ಬೆಳೆಸಿದ್ದಾಳೆಂದು ದೂರಿದ್ದಾನೆ.