ಹಿಂದುಳಿದ ವರ್ಗಗಳಿಗೆ ಸೇರಿದ ಖೈದಿಗಳನ್ನು ಅಡುಗೆ ಮಾಡಲು ಅವಕಾಶ ಕೊಡದೇ ಇದ್ದ 120 ವರ್ಷ ಹಳೆಯ ಕಾಯಿದೆಯೊಂದನ್ನು ರಾಜಸ್ಥಾನ ಸರ್ಕಾರ ಸರಿಪಡಿಸಿದೆ.
ಬ್ರಿಟಿಷ್ ರಾಜ್ ಕಾಲದಲ್ಲಿ ತರಲಾಗಿದ್ದ ಈ ಕಾನೂನನ್ನು ಮುಂದಿಟ್ಟುಕೊಂಡು, ಜೈಲುಗಳಲ್ಲಿರುವ ಖೈದಿಗಳಿಗೆ ಕೆಲಸ ಹಂಚುವ ವಿಚಾರವಾಗಿಯೂ ಸಹ ಜಾತಿ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿತ್ತು. ಜೈಲನ್ನು ಸ್ವಚ್ಛಗೊಳಿಸುವುದು, ಅಡುಗೆ ಮಾಡುವಂಥ ಕೆಲಸಗಳನ್ನು ಜಾತಿ ಆಧಾರದ ಮೇಲೆ ಹಂಚಲಾಗುತ್ತಿತ್ತು.
ಈ ತಾರತಮ್ಯದ ವಿರುದ್ಧ ಬಲವಾದ ದನಿಯೇರಿಸಿದ್ದ ರಾಜಸ್ಥಾನ ಕಾರಾಗೃಹಗಳ ಡಿಜಿ ರಾಜೀವ್ ದಸೋತ್, ಈ ಸಂಬಂಧದ ಕಾಯಿದೆಗೆ ತಿದ್ದುಪಡಿ ತಂದುಕೊಳ್ಳಲು ಸಫಲರಾಗಿದ್ದರು.
ಈ ಸಲ ಬೇಸಿಗೆ ರಜೆ ಕಡಿತ..? ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಗೊಂದಲ: ಖಾಸಗಿ ಶಿಕ್ಷಣ ಸಂಸ್ಥೆಗಳ ವಿರೋಧ
“ಭಾರತಕ್ಕೆ ಸ್ವಾತ್ರಂತ್ರ್ಯ ಬಂದು ಹೊಸ ಕಾನೂನುಗಳನ್ನು ಮಾಡಿದ ಮೇಲೂ ಸಹ ಜಾತಿ ಆಧಾರದ ಮೇಲೆ ಖೈದಿಗಳಲ್ಲೂ ತಾರತಮ್ಯ ಮಾಡುವ ಅನಿಷ್ಟವೊಂದು 1894ರಲ್ಲಿ ಹೊರತರಲಾದ ಕಾರಾಗೃಹಗಳ ಕಾಯಿದೆ, (1894ರ ಕೇಂದ್ರ ಕಾಯಿದೆ ನಂ 9) ರಾಜಸ್ಥಾನ ಕಾರಾಗೃಹಗಳ ನಿಯಮ, 1951ರ ಅಡಿ ಮುಂದುವರೆಯುತ್ತಲೇ ಇತ್ತು. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕೇವಲ 20 ದಿನಗಳಲ್ಲಿ ತಿದ್ದುಪಡಿ ತರಲು ಸಫಲರಾಗಿದ್ದಾರೆ” ಎಂದು ದಸೋತ್ ತಿಳಿಸಿದ್ದಾರೆ.
ಕಾರಾಗೃಹಗಳಲ್ಲಿ ಅಡುಗೆ ಮಾಡುವವರು ಬ್ರಾಹ್ಮಣರು ಅಥವಾ ಹಿಂದೂ ಜೈಲುವಾಸಿಗಳ ಪೈಕಿ ಮೇಲ್ಜಾತಿಯವರು ಎಂದು ಕಾಯಿದೆಯಲ್ಲಿ ನಮೂದಿಸಲಾಗಿದೆ. ಇದೇ ವೇಳೆ ಜೈಲುಗಳನ್ನು ಸ್ವಚ್ಛಗೊಳಿಸುವ ಕಾಯಕವನ್ನು ’ಕೆಳ ವರ್ಗ’ ಎನ್ನಲಾಗುವ ಕೆಟಗರಿಯಲ್ಲಿ ಬರುತ್ತಿದ್ದ ಮಂದಿಗೆ ಕೊಡಲಾಗುತ್ತಿತ್ತು. ಹೊಸ ತಿದ್ದುಪಡಿ ಮೂಲಕ ಈ ತಾರತಮ್ಯವನ್ನು ಕಿತ್ತೊಗೆಯಲಾಗಿದೆ.