ಏಳನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಹುಡುಗನೊಬ್ಬ ಹೈದರಾಬಾದ್ ಮೃಗಾಲಯದಲ್ಲಿರುವ ಹುಲಿಯೊಂದನ್ನು ದತ್ತು ಪಡೆದುಕೊಂಡಿದ್ದಾನೆ.
ಮೃಗಾಲಯದ ಅಧಿಕಾರಿಗಳಿಗೆ 25,000 ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿದ ಈ ಹುಡುಗ, ಮೂರು ತಿಂಗಳ ಹುಲಿಗೆ ’ಸಂಕಲ್ಪ’ ಎಂದು ನಾಮಕರಣ ಮಾಡಿದ್ದಾನೆ. ಚಿನ್ಮಯ್ ಸಿದ್ಧಾರ್ಥ ಶಾ ಹೆಸರಿನ ಈ ಬಾಲಕ ತನ್ನ ಹುಟ್ಟುಹಬ್ಬದ ಬಜೆಟ್‌ನಲ್ಲಿ ಹುಲಿಯನ್ನು ದತ್ತು ಪಡೆಯಲು ನಿರ್ಧರಿಸಿದ್ದ ಎಂದು ಮೃಗಾಲಯವು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ, ಮತ್ತಿಬ್ಬರು ವಿದ್ಯಾರ್ಥಿಗಳಾದ ಹರ್ವಿಷಾ ಜೈನ್ ಹಾಗೂ ವಿಹಾನ್ ಅತುಲ್ ಇರುಳು ಹೊತ್ತು ಸಕ್ರಿಯವಾಗಿರುವ ಪ್ರಾಣಿಗಳನ್ನು ದತ್ತು ಪಡೆದರೆ, ಪ್ರೇಕ್ಷಾ, ಪ್ರಿಯಾಲ್ ಮತ್ತು ಭಕ್ತಿ ನಾಡ್ಗಾ ಹೆಸರಿನ ಮೂವರು ಸಹೋದರಿಯರು ತಲಾ 5,000 ರೂ.ಗಳ ಚೆಕ್ ನೀಡಿ ಪುಟಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ.