ಈಗಿನ ಮಕ್ಕಳು ಅತಿ ಬುದ್ಧಿವಂತರು. ಅವರನ್ನು ಪಾಲಕರು ಸ್ನೇಹಿತರಂತೆ ನೋಡಿಕೊಳ್ಳಬೇಕು. ಅವ್ರ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು. ಮಕ್ಕಳ ಮೇಲೆ ಶಿಕ್ಷಣದ ಹೊಣೆ ಹೇರಿದ್ರೆ ಅವ್ರು ಪ್ರಾಣ ತೆಗೆದುಕೊಳ್ಳಲೂ ಸಿದ್ಧರಿರ್ತಾರೆ. ಮಕ್ಕಳನ್ನು ನೋಡಿಕೊಳ್ಳುವುದು ಈಗಿನ ಸಮಯದಲ್ಲಿ ಬಹಳ ಜವಾಬ್ದಾರಿಯುತ, ಬುದ್ಧಿವಂತಿಕೆಯ ಕೆಲಸವಾಗಿದೆ.
ರಾಜಸ್ಥಾನದ ಧೌಲ್ಪುರ್ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 10ನೇ ತರಗತಿ ವಿದ್ಯಾರ್ಥಿನಿ, ಪಾಲಕರು ಡಾನ್ಸ್ ಕಲಿಯಲು ಬಿಟ್ಟಿಲ್ಲ ಎಂಬ ಕಾರಣಕ್ಕೆ ಮನೆ ಬಿಟ್ಟಿದ್ದಾಳೆ. ಮನೆಯಲ್ಲಿ ಆಕೆ ಡಾನ್ಸ್ ಪ್ರಾಕ್ಟೀಸ್ ಮಾಡ್ತಿದ್ದಳು ಎನ್ನಲಾಗಿದೆ. ಆದ್ರೆ ಪಾಲಕರಿಗೆ ಇದು ಇಷ್ಟವಿರಲಿಲ್ಲ. ಮಗಳಿಗೆ ಗದರುತ್ತಿದ್ದರಂತೆ. ಇದ್ರಿಂದ ಕೋಪಗೊಂಡ ವಿದ್ಯಾರ್ಥಿನಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ.
ಮಾವನ ಮನೆಗೆ ಹೋಗಿದ್ದ ವಿದ್ಯಾರ್ಥಿನಿ ಡಾನ್ಸ್ ಅಕಾಡಮಿಯಲ್ಲಿ ಅಡ್ಮಿಷನ್ ಮಾಡುವಂತೆ ಕೇಳಿದ್ದಾಳೆ. ಇತ್ತ ಪಾಲಕರು ಮಗಳನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದಾರೆ. ವಿಚಾರಣೆ ವೇಳೆ ವಿದ್ಯಾರ್ಥಿನಿ ಸತ್ಯ ಒಪ್ಪಿಕೊಂಡಿದ್ದಾಳೆ. ಪಾಲಕರು ಅಭ್ಯಾಸ ಮಾಡುವಂತೆ ಒತ್ತಡ ಹೇರುತ್ತಿದ್ದು, ಅನವಶ್ಯಕ ಹೊಡೆಯುತ್ತಾರೆ. ನನಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿಯಿಲ್ಲ. ಡಾನ್ಸ್ ಕಲಿಯಬೇಕೆಂದು ಹೇಳಿದ್ದಾಳೆ. ಆಕೆಗೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಡಾನ್ಸ್ ಕಲಿಸುವ ಭರವಸೆ ನೀಡಿ ಮನೆಗೆ ಕಳುಹಿಸಿದ್ದಾರೆ.