ದೇಶವೆಲ್ಲಾ ಕೋವಿಡ್ ಎಂದರೆ ಭಯಭೀತಗೊಂಡಿರುವ ಅವಧಿಯಲ್ಲಿ ಶತಾಯುಷಿಗಳನೇಕರು ಈ ಸೋಂಕಿನಿಂದ ಚೇತರಿಸಿಕೊಂಡು ಬರುವ ಮೂಲಕ ಜನಮನದಲ್ಲಿ ಭರವಸೆಯ ಬೆಳ್ಳಿಗೆರೆಗಳನ್ನು ಮೂಡಿಸುತ್ತಿದ್ದಾರೆ.
ಮಹಾರಾಷ್ಟ್ರದ ಪಾಲ್ಗರ್‌ನ 103 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕಿಗೆ ತುತ್ತಾಗಿ ಇದೀಗ ಚೇತರಿಸಿಕೊಂಡು ಹೊರಬಂದಿದ್ದಾರೆ. ಶಾಮ್‌ರಾವ್ ಇಂಗಳೆ ಹೆಸರಿನ ಈ ವ್ಯಕ್ತಿ ಇಲ್ಲಿನ ವೀರೇಂದ್ರ ನಗರ ಪ್ರದೇಶದವರಾಗಿದ್ದಾರೆ. ಕೋವಿಡ್ ಸೋಂಕು ಬಂದ ಮೇಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕಿನಿಂದ ಚೇತರಿಸಿಕೊಂಡು ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಶತಾಯುಷಿ ಶಾಮ್‌ರಾವ್.
ರಾಜ್ಯದಲ್ಲಿ ಸಾವಿನ ಸುನಾಮಿ, ಕೊರೋನಾ ಮರಣ ಮೃದಂಗಕ್ಕೆ 490 ಸೋಂಕಿತರು ಬಲಿ
ಪಾಲ್ಗರ್ ಕಲೆಕ್ಟರ್ ಡಾ. ಮಾಣಿಕ್ ಗುರ್ಸಾಲ್ ಹಾಗೂ ಆಸ್ಪತ್ರೆ ಸಿಬ್ಬಂದಿ ಈ ಶತಾಯುಷಿಯನ್ನು ಹೂಮಳೆ ಸುರಿಸುವ ಮೂಲಕ ಬೀಳ್ಕೊಟ್ಟಿದ್ದಾರೆ.
ಮಹಾರಾಷ್ಟ್ರದ ಲಾತೂರ್‌ನಲ್ಲಿ ಏಪ್ರಿಲ್ 28ರಂದು 105 ವರ್ಷದ ವ್ಯಕ್ತಿ ಹಾಗೂ 95 ವರ್ಷ ವಯಸ್ಸಿನ ಅವರ ಮಡದಿ ಕೋವಿಡ್-19ನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಲ್ಲಿನ ವಿಲಾಸ್‌ರಾವ್ ದೇಶಮುಖ್ ಆಸ್ಪತ್ರೆಯಲ್ಲಿ 10 ದಿನಗಳ ಮಟ್ಟಿಗೆ ದಾಖಲಾಗಿದ್ದ ಈ ವೃದ್ಧ ದಂಪತಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು.