ಅಸ್ಸಾಂನ 100 ವರ್ಷದ ವೃದ್ಧೆಯೊಬ್ಬರು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿದ್ದಾರೆ.
ಮಾಯಿ ಹಂದಿಕ್ ಹೆಸರಿನ ಈ ಮಹಿಳೆ ಅಸ್ಸಾಂನ ಅತ್ಯಂತ ಹಿರಿಯ ಕೋವಿಡ್ ಸೋಂಕಿತರಾಗಿದ್ದರು. ಗುವಾಹಟಿಯ ಮಹೇಂದ್ರ ಮೋಹನ್ ಚೌಧರಿ ಆಸ್ಪತ್ರೆಗೆ ದಾಖಲಾಗಿದ್ದ ಮಾಯಿ ಬುಧವಾರದಂದು ಡಿಸ್ಚಾರ್ಜ್ ಆಗಿದ್ದಾರೆ. ವೃದ್ಧಾಶ್ರಮವೊಂದರಲ್ಲಿ ಇರುವ ವೃದ್ದೆ ಹತ್ತು ದಿನಗಳ ಹಿಂದೆ ಕೋವಿಡ್-19 ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಮಾಯಿ ಹಂದಿಕ್ರ ಡಿಸ್ಚಾರ್ಜ್ ಸಂದರ್ಭವನ್ನು ಆಚರಿಸಲು ವೈದ್ಯರು ಸಣ್ಣದೊಂದು ಪಾರ್ಟಿ ಹಮ್ಮಿಕೊಂಡಿದ್ದರು. ಅಸ್ಸಾಮೀ ಹಾಡುಗಳನ್ನು ಹಾಡುತ್ತಾ ಹಂದಿಕ್ ಸಹ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.