ಜೇನುತುಪ್ಪ ವ್ಯವಹಾರ ನಡೆಸುವ ಭಾರತೀಯ ಕಂಪನಿಗಳು ಇದರಲ್ಲಿ ಕಲಬೆರಕೆ ಮಾಡುವ ಸಲುವಾಗಿ ಚೀನಾದಿಂದ ಸಂಶ್ಲೇಷಿತ ಸಕ್ಕರೆ ಪಾಕಗಳನ್ನ ಆಮದು ಮಾಡುಕೊಳ್ಳುತ್ತಿವೆ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಹೊರಬಿದ್ದಿದೆ.
ದೇಶದಲ್ಲಿ ಜೇನತುಪ್ಪ ಉದ್ಯಮದಲ್ಲಿ ಹೆಸರುಗಳಿಸಿರುವ ಪ್ರಮುಖ ಬ್ರ್ಯಾಂಡ್ಗಳೇ ಶುದ್ಧತೆಯ ಪರೀಕ್ಷೆಯಲ್ಲಿ ವಿಫಲವಾಗಿವೆ ಅಂತಾ ವಿಜ್ಞಾನ ಹಾಗೂ ಪರಿಸರ ಕೇಂದ್ರ ಮಾಹಿತಿ ನೀಡಿದೆ.
ಭಾರತೀಯ ಜೇನುತುಪ್ಪ ಕಂಪನಿಗಳ ಮೇಲೆ ನಡೆಸಲಾದ ತನಿಖೆ ಬಳಿಕ ಈ ಅಂಶ ತಿಳಿದು ಬಂದಿದೆ. ಸಿಎಸ್ಇ ಆಹಾರ ಸಂಶೋಧಕರು ಡಾಬರ್, ಪತಂಜಲಿ, ಬೈದ್ಯನಾಥ್ ಹಾಗೂ ಝಾಂಡು ಸೇರಿದಂತೆ ಒಟ್ಟು 13 ಬ್ರ್ಯಾಂಡ್ಗಳ ಮೇಲೆ ಪರೀಕ್ಷೆ ನಡೆಸಿದ್ದರು. ಇದರಲ್ಲಿ ಕೇವಲ ಮೂರು ಬ್ರ್ಯಾಂಡ್ಗಳು ಮಾತ್ರ ಶುದ್ಧತೆಯ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ.