ಶ್ರಮದ ಕೆಲಸ ಮಾಡುವುದರಿಂದ ಸಾಕಷ್ಟು ಬೆವರು ಇಳಿದು ದೇಹ ಗಟ್ಟಿಮುಟ್ಟಾಗುತ್ತದೆ. ಜಿಮ್ ಸೇರಿಕೊಂಡು ಮೈ ಹರವು ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ಆದರೆ ಈ ಜಿಮ್ ಎಲ್ಲಾ ಭಾರೀ ದುಡ್ಡು ವ್ಯಯಿಸಿ ಮಾಡಬೇಕಾದ ಕಲೆಗಳು.
ದಿನಗೂಲಿ ಕಾರ್ಮಿಕರೊಬ್ಬರು ಭಾರೀ ಪರಿಶ್ರಮದಿಂದ ತಮ್ಮ ದೇಹವನ್ನು ಹುರಿಗೊಳಿಸಿಕೊಂಡಿರುವ ಚಿತ್ರಗಳು ಫೇಸ್ಬುಕ್‌ನಲ್ಲಿ ವೈರಲ್ ಆಗಿವೆ. ಈ ವ್ಯಕ್ತಿಯ ಹುರಿಗಟ್ಟಿದ ದೇಹವನ್ನು ಕಂಡ ಫಿಟ್ನೆಸ್ ಪ್ರಿಯರು ತಂತಮ್ಮ ವ್ಯಾಯಾಮದ ಪ್ಲಾನ್‌ಗಳಿಗೆ ಹೊಸ ತಿರುವು ಕೊಡುವ ಆಲೋಚನೆ ಮಾಡುತ್ತಿದ್ದಾರೆ.
ಗಾರೆ ಕೆಲಸ ಮಾಡುವ ಈ ವ್ಯಕ್ತಿ ಯಾವುದೇ ಜಿಮ್ ಅಥವಾ ಟ್ರೇನರ್ ನೆರವಿಲ್ಲದೇ ತಮ್ಮ ಮೈಯನ್ನು ಹದ ಮಾಡಿಕೊಂಡಿದ್ದಾರೆ. ಯಾವುದೇ ವೃತ್ತಿಪರ ಬಾಡಿ ಬಿಲ್ಡರ್‌ಗೂ ಕಡಿಮೆ ಇಲ್ಲದಂತೆ ತಮ್ಮ ಮೈಯನ್ನು ಹುರಿ ಮಾಡಿಕೊಂಡಿದ್ದಾರೆ ಇವರು.