ಕೊರೊನಾಗೆ ಪರೀಕ್ಷೆ ಮಾಡಲು ಹಿಂಜರಿಯುವ ಜನರಿಗೆ ನೆಮ್ಮದಿ ಸುದ್ದಿಯಿದೆ. ನಿಮ್ಮ ವರದಿ ಸಕಾರಾತ್ಮಕವಾಗಿದ್ದರೂ ನೀವು ಮನೆಯಲ್ಲಿಯೇ ಪ್ರತ್ಯೇಕವಾಗಿರಬಹುದು. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿಲ್ಲ. ಮುಂದಿನ ವಾರದ ವೇಳೆಗೆ ಮಧ್ಯಪ್ರದೇಶದ ರತ್ಲಂನಲ್ಲಿ ನಿಯಮ ಅನ್ವಯವಾಗಲಿದೆ.
ಪ್ರತ್ಯೇಕವಾಗಿರಲು ಬಯಸುವ ಜನರಿಗೆ ವಾಸಕ್ಕೆ ಪ್ರತ್ಯೇಕ ಕೊಠಡಿ, ಸ್ನಾನ, ಶೌಚಾಲಯದ ವ್ಯವಸ್ಥೆಯಿರಬೇಕು. ಕೊರೊನಾದ ಯಾವುದೇ ರೋಗಲಕ್ಷಣಗಳನ್ನು ತೋರಿಸದ ರೋಗಿಗಳು ಮಾತ್ರ ರೂಮ್ ಐಸೋಲೇಷನ್ ನಲ್ಲಿ ಇರಬಹುದು.
ರಾಪಿಡ್ ರೆಸ್ಪಾನ್ಸ್ ತಂಡವು ರೋಗಿ ಮನೆಗೆ ಹೋಗಿ ಪರಿಶೀಲನೆ ನಡೆಸಲಿದೆ. ಕೋಣೆ, ಶೌಚಾಲಯ, ಸ್ನಾನದ ಮನೆ ಪ್ರತ್ಯೇಕವಾಗಿರುವುದನ್ನು ಪರಿಶೀಲಿಸುವ ಜೊತೆಗೆ ಕೇರ್ ಟೇಕರ್ ಕೊರೊನಾ ನೆಗೆಟಿವ್ ಎಂಬುದನ್ನೂ ಪರೀಕ್ಷಿಸುತ್ತಾರೆ. ನಂತ್ರ ರೋಗಿಗಳಿಗೆ ಮನೆಯಲ್ಲಿರಲು ಅವಕಾಶ ಸಿಗಲಿದೆ.