ಆಗ್ರಾದಲ್ಲಿ ಪತ್ನಿಯಿಂದ ಮೋಸಹೋದ ಪತಿ, ಚಪ್ಪಲಿ ಏಟು ನೀಡಿದ್ದಾನೆ. ಪ್ರೇಮಿ ಜೊತೆ ಹೊಟೇಲ್ ನಲ್ಲಿದ್ದ ಪತ್ನಿ, ಪತಿ ಕಣ್ಣಿಗೆ ಬಿದ್ದಿದ್ದಾಳೆ. ಇದ್ರಿಂದ ಕೋಪಗೊಂಡ ಪತಿ ಮೊದಲು ಕಪಾಳ ಮೋಕ್ಷ ಮಾಡಿದ್ದಾನೆ. ನಂತ್ರ ಕಾಲಿನಲ್ಲಿದ್ದ ಚಪ್ಪಲಿ ಕೈಗೆ ಬಂದಿದೆ.
ಪತ್ನಿ ಮೇಲೆ ಪತಿಗೆ ಅನುಮಾನವಿತ್ತು ಎನ್ನಲಾಗಿದೆ. ನಿನ್ನೆ ಪತ್ನಿ, ಪ್ರೇಮಿ ಜೊತೆ ಹೊಟೇಲ್ ರೂಮಿನಲ್ಲಿರುವುದು ಗೊತ್ತಾಗಿದೆ. ತಕ್ಷಣ ಪತಿ ಅಲ್ಲಿಗೆ ಹೋಗಿದ್ದಾನೆ. ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಪತ್ನಿ ನೋಡಿದ ಪತಿ ಕೋಪ ನೆತ್ತಿಗೇರಿದೆ. ಮೊದಲು ಕಪಾಳಮೋಕ್ಷ ಮಾಡಿ ನಂತ್ರ ಚಪ್ಪಲಿ ಏಟು ನೀಡಲು ಶುರು ಮಾಡಿದ್ದಾನೆ.
ಮಾತನಾಡಲು ಅವಕಾಶ ನೀಡುವಂತೆ ಪತ್ನಿ ಅನೇಕ ಬಾರಿ ಬೇಡಿಕೊಂಡಿದ್ದಾಳೆ. ಆದ್ರೆ ಪತ್ನಿ ಮಾತು ಕೇಳುವ ಸ್ಥಿತಿಯಲ್ಲಿ ಪತಿ ಇರಲಿಲ್ಲ ಎನ್ನಲಾಗಿದೆ. ಇದ್ರ ವಿಡಿಯೋವನ್ನು ಪತಿ ಮಾಡಿದ್ದಾನೆ. ಅದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ.