ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಭಾರತೀಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ದೆಹಲಿ ಮೂಲದ ಫಾರ್ಮಾ ಕಂಪನಿಯೊಂದು ಭಾರತದ ಮೊದಲ ಕ್ಷಿಪ್ರ ಪರೀಕ್ಷಾ ಕಿಟ್ ಅಭಿವೃದ್ಧಿಪಡಿಸಿದೆ. ಈ ಕಿಟ್ ಮೂಲಕ ಕೇವಲ 20 ನಿಮಿಷಗಳಲ್ಲಿ ಕೊರೊನಾ ಫಲಿತಾಂಶ ಲಭ್ಯವಾಗಲಿದೆ.
ಈ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮೋದನೆ ನೀಡಿದೆ. ಕಿಟ್‌ನ ಬೆಲೆ ಸುಮಾರು 200 ರೂಪಾಯಿ ಎನ್ನಲಾಗಿದೆ. ಆಸ್ಕರ್ ಮೆಡಿಕೇರ್ ಇದನ್ನು ತಯಾರಿಸಿದೆ. ಕಂಪನಿಯು ತನ್ನ ಲ್ಯಾಬ್‌ನಲ್ಲಿ ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು, ಎಚ್‌ಐವಿ ಏಡ್ಸ್, ಮಲೇರಿಯಾ ಮತ್ತು ಡೆಂಗ್ಯೂಗೆ ಪರೀಕ್ಷಾ ಕಿಟ್ ತಯಾರಿಸುತ್ತದೆ.
ಸೆಪ್ಟೆಂಬರ್ ವೇಳೆಗೆ ಕಿಟ್ ಮಾರುಕಟ್ಟೆಗೆ ಬರಲಿದೆ. ಸುಮಾರು 2 ಲಕ್ಷ ಕಿಟ್ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಹೇಳಿದೆ. ಸದ್ಯ ಭಾರತದಲ್ಲಿ ಸ್ಟ್ಯಾಂಡರ್ಡ್ ಕ್ಯೂ ಕೋವಿಡ್ -19 ಎಜಿಯನ್ನು ಕೊರೊನಾ ಪರೀಕ್ಷೆಗೆ ಬಳಸಲಾಗ್ತಿದೆ.