ಬಿಹಾರದ ಹಾಜಿಪುರದ ವಸತಿ ಪ್ರದೇಶದಲ್ಲಿ ನಡೆಯುತ್ತಿರುವ ಲೈಂಗಿಕ ದಂಧೆಯ ಬಣ್ಣ ಬಯಲಾಗಿದೆ. ವೇಶ್ಯಾವಾಟಿಕೆ ನಡೆಸ್ತಿದ್ದ ವಿಷ್ಯ ಗೊತ್ತಾಗುತ್ತಿದ್ದಂತೆ ದಂಪತಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.
ನಾಲ್ಕೈದು ತಿಂಗಳಿಂದ ಯುವತಿಯನ್ನು ಬಂಧಿಸಿಟ್ಟುಕೊಂಡಿದ್ದ ದಂಪತಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇವ್ರ ಮನೆಗೆ ಸ್ಥಳೀಯ ರಾಜಕಾರಣಿಗಳು, ಪೊಲೀಸರು, ಪತ್ರಕರ್ತರು ಬರ್ತಿದ್ದರು ಎನ್ನಲಾಗಿದೆ. ಡೈರಿಯೊಂದು ಸಿಕ್ಕಿದ್ದು, ಅದ್ರಲ್ಲಿ ಅನೇಕರ ಹೆಸರಿದೆ. ದಂಪತಿ ಕೈನಿಂದ ತಪ್ಪಿಸಿಕೊಂಡ ಯುವತಿ ಗ್ರಾಮಸ್ಥರಿಗೆ ವಿಷ್ಯ ತಿಳಿಸಿದ್ದಳು.
ಕೋಪಗೊಂಡ ಗ್ರಾಮಸ್ಥರು ಮನೆಗೆ ನುಗ್ಗಿ ಇಬ್ಬರಿಗೂ ಥಳಿಸಿದ್ದಾರೆ. ವಿಷ್ಯ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.