ಕೇಂದ್ರ ಸರ್ಕಾರ ದೇಶದ ಹಿರಿಯ ನಾಗರಿಕರ ಮೇಲೆ ವಿಶೇಷ ಕಾಳಜಿ ವಹಿಸಲು ಮುಂದಾಗಿದೆ. ಕೇಂದ್ರ ಸಾಮಾಜಿಕ ಸಬಲೀಕರಣ ಸಚಿವಾಲಯ ಮುಂದಿನ ತಿಂಗಳು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಿದೆ. ಇಡೀ ದೇಶಕ್ಕೆ ಒಂದೇ ಸಹಾಯವಾಣಿ ಸಂಖ್ಯೆ ಇರಲಿದೆ.
ಮಕ್ಕಳ ಸಹಾಯವಾಣಿಯಂತೆ, ಹಿರಿಯ ನಾಗರಿಕರ ಸಹಾಯವಾಣಿ ಕೆಲಸ ಮಾಡಲಿದೆ. ಇದನ್ನು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಸಚಿವಾಲಯದ ಪರವಾಗಿ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗುವುದು.
ದೈಹಿಕ ಅಥವಾ ಮಾನಸಿಕ ಚಿತ್ರಹಿಂಸೆಯಾದ ಸಂದರ್ಭದಲ್ಲಿ ಈ ಸಂಖ್ಯೆ ಮೂಲಕ ಹಿರಿಯರು ಆನ್‌ಲೈನ್ ಸಲಹೆ, ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯಬಹುದು. ಈ ಸಹಾಯವಾಣಿ ಸಂಖ್ಯೆಯಲ್ಲಿ ದೂರು ಅಥವಾ ಸಲಹೆಗಳನ್ನು ಕೇಳಿದ ನಂತರ, ಅವರ ಸಮಸ್ಯೆಯನ್ನು ಸಂಬಂಧಪಟ್ಟ ರಾಜ್ಯ ಸರ್ಕಾರವು ಪರಿಹರಿಸಲಿದೆ. 2011 ರ ವೇಳೆಯಲ್ಲಿ ದೇಶದಲ್ಲಿ 10 ಕೋಟಿಗೂ ಹೆಚ್ಚು ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು. 2030 ರ ವೇಳೆಗೆ ಈ ಸಂಖ್ಯೆ 20 ಕೋಟಿ ದಾಟಲಿದೆ.