ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿರುವ ವಿಜ್ಞಾನಿಯೊಬ್ಬರನ್ನು ಹನಿ ಟ್ರ್ಯಾಪ್ ನಲ್ಲಿ ಸಿಕ್ಕಿಬೀಳಿಸಲಾಗಿದೆ. ಶನಿವಾರ ಸಂಜೆ, ವಿಜ್ಞಾನಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು.
ಭಾನುವಾರ ಬೆಳಿಗ್ಗೆ ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಂಜೆ ವೇಳೆಗೆ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಉಳಿದವರ ಹುಡುಕಾಟ ನಡೆದಿದೆ.
ಸೆಕ್ಟರ್ 77ರಲ್ಲಿ ವಾಸವಾಗಿರುವ ವಿಜ್ಞಾನಿ ಒಂದು ತಿಂಗಳ ಹಿಂದೆ ಮಸಾಜ್ ಸೆಂಟರ್ ಹುಡುಕಾಟ ನಡೆಸಿದ್ದರು. ಆನ್ಲೈನ್ ನಲ್ಲಿ ನಂಬರ್ ಸಿಕ್ಕಿತ್ತು. ಆ ನಂಬರ್ ರಿಸೀವ್ ಮಾಡಿದ್ದ ಮಹಿಳೆ ವಿಜ್ಞಾನಿಯನ್ನು ಹನಿ ಟ್ರ್ಯಾಪ್ ಮಾಡಿದ್ದಳು. ಶನಿವಾರ ವಿಜ್ಞಾನಿ ಮನೆಗೆ ಯುವಕನನ್ನು ಕಳುಹಿಸಿದ್ದಳು. ಯುವಕ, ವಿಜ್ಞಾನಿಯನ್ನು ಹೊಟೇಲ್ ಗೆ ಕರೆ ತಂದಿದ್ದಾನೆ. ಅಲ್ಲಿ ಮಹಿಳೆ ಜೊತೆ ಮೂವರು ಇದ್ದರು ಎನ್ನಲಾಗಿದೆ. ವಿಜ್ಞಾನಿ ಹೊಟೇಲ್ ಗೆ ಬರ್ತಿದ್ದಂತೆ ಆತನ ಕೈಕಾಲು ಕಟ್ಟಿದ್ದಾರೆ. ನಂತ್ರ ಪತ್ನಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.