ಹತ್ರಾಸ್ ಗ್ಯಾಂಗ್‌ರೇಪ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ರಾಜಕೀಯವಾಗಿ ತಿರುವ ಪಡೆದಿರುವ ಈ ಪ್ರಕರಣಕ್ಕೆ ಇದೀಗ ಬಿಜೆಪಿ ಮುಖಂಡನ ವಾದ ಅನೇಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದು ರೇಪ್ ಅಲ್ಲವೇ ಅಲ್ಲ ಎಂಬ ಹೇಳಿಕೆ ನೀಡಿರುವ ಕಾಶಿ ಕ್ಷೇತ್ರದ ಬಿಜೆಪಿ ಜಾಲತಾಣ ಮುಖ್ಯಸ್ಥ ಶಶಿಕುಮಾರ್ ಮಾಧ್ಯಮಗಳ ಮೇಲೆಯೂ ಹರಿಹಾಯ್ದಿದ್ದಾರೆ.
ಹೌದು, ಈ ಬಿಜೆಪಿ ಮುಖಂಡ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ದಾಖಲೆ ಹಾಗೂ ವಿಡಿಯೋವನ್ನು ಹರಿ ಬಿಟ್ಟಿದ್ದಾರೆ. ಹಾಗು ಸಾಲು ಸಾಲು ಟ್ವಿಟ್ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಇದೊಂದು ಗ್ಯಾಂಗ್ ರೇಪ್ ಅಲ್ಲ ಎಂಬ ವಾದವನ್ನು ಮಂಡಿಸಿದ್ದಾರೆ.
ಸಂತ್ರಸ್ತ ಯುವತಿಗೂ ಹಾಗೂ ಆರೋಪಿ ಸಂದೀಪ್‌ಗೂ ಮೊದಲೇ ಪ್ರೀತಿಯಾಗಿತ್ತು. ಇದರ ಮಧ್ಯೆ ಈ ಕುಟುಂಬಗಳ ನಡುವೆ ಹಳೆಯ ದ್ವೇಷ ಇತ್ತು. ಆರೋಪಿ ಸಂದೀಪ್ ಹಾಗೂ ಸಂತ್ರಸ್ತೆಯ ನಡುವೆ ಪ್ರೀತಿ ಇರೋದ್ರಿಂದ ಈ ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಇದನ್ನರಿತ ಯುವತಿ ಕುಟುಂಬದವರು ಆರೋಪಿ ಸಂದೀಪ್‌ಗೆ ಥಳಿಸಿದ್ದಾರೆ. ನಂತರ ಊರಿನವರ ಮುಂದೆ ರಾಜಿ ಸಂಧಾನವಾಗಿ ಮದುವೆ ಮಾಡಲು ಒಪ್ಪಿದ್ದರು.
ಆದರೆ ಯುವತಿಯ ಅಣ್ಣನಿಗೆ ಈ ಮದುವೆ ಇಷ್ಟವಿರಲಿಲ್ಲ. ಹಾಗಾಗಿ ಮದುವೆ ಬೇಡವೆಂದು ನಿರ್ಧರಿಸಲಾಗಿತ್ತು. ನಂತರವೂ ಈ ಇಬ್ಬರು ಯಾರಿಗೂ ತಿಳಿಯದಂತೆ ಭೇಟಿ ಮಾಡುತ್ತಿದ್ದರು. ಆ ಸಂತ್ರಸ್ತೆ ಸಾವನ್ನಪ್ಪುವ ದಿನವೂ ಇಬ್ಬರು ಭೇಟಿ ಮಾಡಿದ್ದಾರೆ. ಇವರನ್ನು ಒಟ್ಟಿಗೆ ನೋಡಿದ್ದ ಯುವತಿಯ ಅಣ್ಣ ಕೋಪದಿಂದ ಆಕೆಯನ್ನು ಉಸಿರು ಗಟ್ಟಿಸಿ ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಇಲ್ಲಿ ರಾಜಕೀಯ ಮಾಡುತ್ತಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.