ಕಾನ್ಪುರ: ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕಾನ್ಪುರದಲ್ಲಿ ಸೇನಾಧಿಕಾರಿಯೊಬ್ಬರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಸೇನಾಧಿಕಾರಿ ಕರ್ನಲ್ ನೀರಜ್ ಗೆಹ್ಲೇಟ್ ಎಂದು ಗುರುತಿಸಲಾಗಿದೆ. ಕೃತ್ಯದ ಬಳಿಕ ಕಾನ್ಪುರದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದ ವೇಳೆ ನೀರಜ್ ಗೆಹ್ಲೇಟ್ ನನ್ನು ಬಂಧಿಸಲಾಗಿದೆ.
ಕಾನ್ಪುರದಲ್ಲಿ ಸೇನಾಧಿಕಾರಿಗಳ ಮೆಸ್ ನಲ್ಲಿ ಕರ್ನಲ್ ನೀರಜ್ ತನ್ನ ಸ್ನೇಹಿತನ ಪತ್ನಿ ರಷ್ಯಾ ಮೂಲದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಪಾನೀಯದಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿಕೊಟ್ಟು ಈ ಕೃತ್ಯವೆಸಗಿದ್ದರು ಎಂದು ದೂರಲಾಗಿತ್ತು.
ಆರೋಪಿ ಕರ್ನಲ್ ಬಂಧನಕ್ಕೆ ವಿಶೇಷ ತಂಡ ರಚನೆಯಾಗಿತ್ತು. ಇದೀಗ ಕರ್ನಲ್ ನನ್ನು ಬಂಧಿಸಲಾಗಿದೆ ಎಂದು ಎಸ್.ಪಿ.ರಾಜಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.