ಚೆನ್ನೈ: ರಾಜಕೀಯ ಪ್ರವೇಶದಿಂದ ಹಿಂದೆ ಸರಿದ ಸೂಪರ್ ಸ್ಟಾರ್ ರಜನಿಕಾಂತ್ ಗೆ ಇದೀಗ ಅವರು ಸ್ಥಾಪಿಸಲು ಹೊರಟಿದ್ದ ರಜನಿ ಮಕ್ಕಳ್ ಮಂದ್ರಂ ಪಕ್ಷದ ಪದಾಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.
ರಜನಿ ರಾಜಕೀಯ ನಿರ್ಧಾರದಿಂದ ಹಿಂದೆ ಸರಿದ ಬೆನ್ನಲ್ಲೇ ಅವರ ಬೆಂಬಲಿಗರು ಬೇರೆ ಪಕ್ಷದತ್ತ ಚಿತ್ತ ಹರಿಸಿದ್ದು, ರಜನಿ ಸ್ಥಾಪಿಸಲು ಹೊರಟಿದ್ದ ರಜನಿ ಮಕ್ಕಳ್ ಮಂದ್ರಂ ಪಕ್ಷದ ಪದಾಧಿಕಾರಿಗಳು ಪಕ್ಷ ತೊರೆದು ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ.
ರಜನಿ ಮಕ್ಕಳ್ ಮಂದ್ರಂ ನ ಜಿಲ್ಲಾ ಘಟಕಗಳ ಕಾರ್ಯದರ್ಶಿಗಳಾದ ಎ. ಜೋಸೆಫ್ ಸ್ಟಾಲಿನ್, ಕೆ. ಸೆಂಥಿಲ್ ಸೆಲ್ವಾನಂದ ಹಾಗೂ ಆರ್. ಗಣೇಶನ್ ಎಂ.ಕೆ. ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆ ಸೇರ್ಪಡೆಯಾಗಿದ್ದಾರೆ.