
ಹಾರ್ಡೊಯ್ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಒಂದು ವರ್ಷದ ಹಿಂದೆ ಮಹಿಳೆಯೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದರು. ಆದ್ರೆ ಚಿಕಿತ್ಸೆ ನಂತ್ರವೂ ಮಹಿಳೆಗೆ ಮಗು ಜನಿಸಿದೆ.
ಪೀಡಿತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜನವರಿ 4, 2019ರಂದು ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಳು. ಈಗಾಗಲೇ ಆಕೆಗೆ ಐದು ಮಗುವಿದೆ. ಸಂತಾನಹರಣ ಚಿಕಿತ್ಸೆ ನಂತ್ರ 6ನೇ ಮಗು ಜನಸಿದೆ.
ಪ್ರಕರಣದ ವಿಚಾರಣೆ ಶುರುವಾಗಿದೆ. ವಿಚಾರಣೆ ನಂತ್ರ ಸೂಕ್ತ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.