ಏಷ್ಯಾದ ಅತಿ ದೊಡ್ಡ ಟುಲಿಪ್ ಉದ್ಯಾನ ಎಂದರೆ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್. ಪ್ರತಿ ಬಾರಿ ಇಲ್ಲಿ ಬಣ್ಣ ಬಣ್ಣದ ಟುಲಿಪ್ ಗಳು ಅರಳಿ ನಿಂತು ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಆದರೆ ಈ ಬಾರಿ ಪ್ರವಾಸ ನಿರ್ಬಂಧಗೊಂಡ ಪರಿಣಾಮ ಅರಳಿನಿಂತ 1.3 ದಶಲಕ್ಷ ಟುಲಿಪ್ಗಳು ಪ್ರವಾಸಿಗರಿಲ್ಲದೆ ಅಕರ್ಷಣೆ ಕಳೆದುಕೊಂಡವು. ಕಾಶ್ಮೀರದ ಹೂಗೊಂಚಲು ಇಲಾಖೆಯ ಪರಿಶ್ರಮ ಈ ಬಾರಿ ನೋಡುಗರಿಲ್ಲದೆ ವ್ಯರ್ಥವಾಯಿತು.
ಪ್ರವಾಸಿಗರಿಲ್ಲದ ವರ್ಷ ದಶಕದಲ್ಲೇ ಮೊದಲು ಎಂದು ಹೇಳಲಾಗಿದ್ದು ಕಳೆದ ಬಾರಿ ಎರಡೂವರೆ ಲಕ್ಷ ಜನ ಇದನ್ನು ವೀಕ್ಷಿಸಿದ್ದರು. ಈ ಉದ್ಯಾನವು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಬ್ ನಬಿ ಆಜಾದ್ ಅವರ ಕನಸಿನ ಕೂಸಾಗಿತ್ತು.
2007ರಲ್ಲಿ ಇದು ಪ್ರವಾಸಿಗಿರಗೆ ಮುಕ್ತವಾಗಿ ತೆರೆದುಕೊಂಡು ಏಷ್ಯಾದ ಅತಿ ದೊಡ್ಡ ಟುಲಿಪ್ ಉದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ದಾಲ್ ಸರೋವರ ತೀರದ 80 ಎಕರೆ ಪ್ರದೇಶದಲ್ಲಿ ಇದು ಹರಡಿಕೊಂಡಿದೆ.