ಕೊರೊನಾದಿಂದಾಗಿ ಇನ್ನೂ ಶಾಲೆಗಳನ್ನು ತೆರೆದಿಲ್ಲ. ಕೇಂದ್ರ ಸರ್ಕಾರ ಸಮ್ಮತಿ ನೀಡಿದರೂ ರಾಜ್ಯ ಸರ್ಕಾರಗಳು ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳನ್ನು ತೆರೆಯೋದಿಕ್ಕೆ ಮುಂದಾಗಿಲ್ಲ. ಜೂನ್‌ನಿಂದ ಆರಂಭವಾಗಬೇಕಿದ್ದ ಶಾಲೆಗಳು ಇನ್ಯಾವಾಗ ತೆರೆಯುತ್ತವೆಯೋ ಗೊತ್ತಿಲ್ಲ.
ಈ ಮಧ್ಯೆ ಶಾಲೆಗಳು ಮುಚ್ಚಿದ್ದರಿಂದ ಲಕ್ಷ ಕೋಟಿ ನಷ್ಟ ಉಂಟಾಗಿದೆಯಂತೆ. ದೇಶದ ಭವಿಷ್ಯದ ಆದಾಯದಲ್ಲಿ ಸುಮಾರು 29.34 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದು ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಕೂಡ ಉಂಟಾಗಲಿದೆಯಂತೆ. ಇದರಿಂದ ಎಲ್ಲಾ ರಾಷ್ಟ್ರಗಳ ಜಿಡಿಪಿ ಕುಸಿತ ಕಾಣುತ್ತದೆ ಎಂದು ಹೇಳಲಾಗಿದೆ.
ಇನ್ನೂ ಈ ನಷ್ಟ ಅನುಭವಿಸಿದ ದೇಶಗಳ ಪೈಕಿ ಹೆಚ್ಚಿನ ನಷ್ಟ ಭಾರತದಲ್ಲಿ ಆಗಲಿದೆಯಂತೆ. ಇದೇ ಪರಿಸ್ಥಿತಿ ಇನ್ನೂ ಕೆಲ ತಿಂಗಳು ಮುಂದುವರೆದರೆ ಆರ್ಥಿಕ ಬಿಕ್ಕಟ್ಟು ಇನ್ನೂ ಹೆಚ್ಚಾಗಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ. ಆರ್ಥಿಕತೆ ನೋಡುತ್ತಾ ಹೋದರೆ ಮಕ್ಕಳ ಆರೋಗ್ಯ ಕಡೆಗಣಿಸಬೇಕಾಗುತ್ತದೆ. ಹೀಗಾಗಿ ದೇಶಗಳು ಸಂದಿಗ್ಧ ಪರಿಸ್ಥಿತಿಯಲ್ಲಿವೆ.