alex Certify ಶಾಕಿಂಗ್ ನ್ಯೂಸ್: ಭಾರತೀಯರ ದಾಖಲೆಗಳನ್ನು ಮಾರಾಟಕ್ಕಿಟ್ಟ ಸೈಬರ್ ಖದೀಮರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಭಾರತೀಯರ ದಾಖಲೆಗಳನ್ನು ಮಾರಾಟಕ್ಕಿಟ್ಟ ಸೈಬರ್ ಖದೀಮರು…!

ಭಾರತೀಯರಿಗೆ ಶಾಕ್ ನೀಡುವಂತಹ ಸುದ್ದಿಯೊಂದನ್ನು ಸೈಬರ್ ಗುಪ್ತಚರ ಸಂಸ್ಥೆ ಸೈಬಲ್ ನೀಡಿದೆ. ಸುಮಾರು ಒಂದು ಲಕ್ಷ ಭಾರತೀಯರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಸೇರಿದಂತೆ ವಿವಿಧ ದಾಖಲೆಗಳ ಸ್ಕ್ಯಾನ್ ಮಾಡಲಾದ ಸುಮಾರು 1ಲಕ್ಷ ಲಕ್ಷ ಪ್ರತಿಗಳನ್ನು ಮಾರಾಟಕ್ಕಿಡಲಾಗಿದೆ ಎಂದು ತಿಳಿಸಿದೆ.

ಇಂತಹ ಕಾರ್ಯಗಳಿಗೆ ಕುಖ್ಯಾತಿ ಪಡೆದಿರುವ ಡಾರ್ಕ್ ವೆಬ್ ಸೈಟ್ ನಲ್ಲಿ ಸೈಬರ್ ಖದೀಮರು ಈ ದಾಖಲೆಗಳನ್ನು ಮಾರಾಟಕ್ಕೆ ಇಟ್ಟಿದ್ದು, ಇದನ್ನು ಬಳಸಿಕೊಂಡು ಬ್ಲಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡಬಹುದು ಎಂದು ಎಚ್ಚರಿಸಲಾಗಿದೆ.

ಈ ದಾಖಲೆಗಳನ್ನು ಮೂರನೇ ವ್ಯಕ್ತಿಯಿಂದ ಪಡೆಯಲಾಗಿರಬಹುದು ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಬಲ್ ಅನುಮಾನ ವ್ಯಕ್ತಪಡಿಸಿದ್ದು, ಸರ್ಕಾರದ ದಾಖಲೆಗಳಿಂದ ಇವುಗಳನ್ನು ಪಡೆದಿರುವ ಸಾಧ್ಯತೆಯಿಲ್ಲ ಎಂದು ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...