ಮಧ್ಯಪ್ರದೇಶದ ಇಂದೋರ್ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆನ್ಲೈನ್ ಗೇಮ್ನಲ್ಲಿ ಸೋತ ನಂತರ 11 ವರ್ಷದ ಹುಡುಗ 10 ವರ್ಷದ ಬಾಲಕಿ ಹತ್ಯೆಗೈದಿದ್ದಾನೆ. ಆನ್ಲೈನ್ ಆಟಗಳಲ್ಲಿ ಮೃತ ಬಾಲಕಿ, ಆರೋಪಿಯನ್ನು ಸೋಲಿಸುತ್ತಿದ್ದಳಂತೆ. ಇದ್ರಿಂದ ಕೋಪಗೊಂಡ ಹುಡುಗ ಬಾಲಕಿ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾನೆ.
ಈ ಘಟನೆ ಇಂದೋರ್ನ ಲಾಸುಡಿಯಾ ಪ್ರದೇಶದಲ್ಲಿ ನಡೆದಿದೆ. ಪೊಲೀಸರು ಆರೋಪಿ ಹುಡುಗನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋದ ಬಾಲಕ ಅಲ್ಲಿ ಬಾಲಕಿ ಹತ್ಯೆ ಮಾಡಿದ್ದಾನೆ.
ಐದನೇ ತರಗತಿ ವಿದ್ಯಾರ್ಥಿನಿ ಹಾಗೂ ಆರೋಪಿ ಆನ್ಲೈನ್ ನಲ್ಲಿ ಆಟವಾಡ್ತಿದ್ದರಂತೆ. ಇದ್ರಲ್ಲಿ ಆರೋಪಿ ಪದೇ ಪದೇ ಸೋಲುತ್ತಿದ್ದನಂತೆ. ಆಟದಲ್ಲಿ ಆತನ ಇಲಿಯೊಂದನ್ನು ಬಾಲಕಿ ಹತ್ಯೆ ಮಾಡಿದ್ದಳು ಎಂಬ ಶಂಕೆ ಬಾಲಕನಿಗಿತ್ತಂತೆ. ಇದೇ ಕಾರಣಕ್ಕೆ ಆತ ಕೋಪಗೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಾಲಕ ಮಾಡಿದ ದಾಳಿಗೆ ಹುಡುಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.