ದೇಶದಾದ್ಯಂತ ಐದನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಕೇಂದ್ರ ಸರ್ಕಾರ, ಧಾರ್ಮಿಕ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದ್ದು ಹೀಗಾಗಿ ತಿರುಪತಿ ಸೇರಿದಂತೆ ದೇಶದ ಬಹುತೇಕ ದೇಗುಲಗಳು ಭಕ್ತರ ದರ್ಶನಕ್ಕಾಗಿ ತೆರೆದುಕೊಂಡಿವೆ.
ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯವೂ ಸಹ ಜೂನ್ 14ರಿಂದ ಆರಂಭವಾಗಲಿದೆ ಎಂದು ಕಳೆದ ವಾರ ಕೇರಳ ಸರ್ಕಾರ ತಿಳಿಸಿದ್ದು, ಹೀಗಾಗಿ ಬಹುದಿನಗಳ ಬಳಿಕ ಸ್ವಾಮಿಯ ದರ್ಶನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದರು.
ಆದರೆ ಕೇರಳದಲ್ಲಿ ಕೋವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯದ ಅರ್ಚಕರು ಭಕ್ತರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಸದ್ಯಕ್ಕೆ ಭಕ್ತರ ದರ್ಶನಕ್ಕೆ ಅವಕಾಶ ನೀಡದಿರಲು ಕೇರಳ ಸರ್ಕಾರ ತೀರ್ಮಾನಿಸಿದೆ. ಜೂನ್ 19ರಿಂದ ಆರಂಭವಾಗಬೇಕಿದ್ದ ಹತ್ತು ದಿನಗಳ ಉತ್ಸವವನ್ನೂ ಮುಂದೂಡಲಾಗಿದೆ.