ಕೊರೊನಾ ಮಹಾಮಾರಿ ಯಾವಾಗ ಹೇಗೆ ತಗುಲುತ್ತದೆ ಎಂಬುದೇ ತಿಳಿಯದಾಗಿದೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮ ವಹಿಸಿದರೂ ಸಾಲದು. ಕೊಂಚ ಯಾಮಾರಿದರೂ ಸೋಂಕಿಗೆ ತುತ್ತಾಗೋದು ಗ್ಯಾರಂಟಿ.
ಹೀಗೆ ಶಬರಿಮಲೆ ದೇವಸ್ಥಾನದಲ್ಲೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಿದ್ದರೂ ಸುಮಾರು 39 ಜನಕ್ಕೆ ಸೋಂಕು ತಗುಲಿದೆಯಂತೆ.
ಹೌದು, ಶಬರಿಮಲೆ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ ಉತ್ಸವ ಆರಂಭವಾಗಿದೆ. ಈ ಉತ್ಸವ ಆರಂಭವಾಗಿ 10 ದಿನಗಳಲ್ಲಿ 39 ಜನಕ್ಕೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 27 ಜನ ದೇವಸ್ಥಾನದ ಸ್ಥಳೀಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿಗಳಾಗಿದ್ದಾರೆ. ಈಗಾಗಲೇ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಇಲ್ಲಿನ ನಾಲ್ಕು ಜನ ನೌಕರರು, ತಾತ್ಕಾಲಿಕವಾಗಿ ಸೇವೆಗೆ ಬಂದಿದ್ದ ಇಬ್ಬರು ಸಿಬ್ಬಂದಿ ಹಾಗೂ ಭದ್ರತೆಗೆ ನಿಯೋಜನೆಗೊಂಡಿರುವ ಇಬ್ಬರು ಪೊಲೀಸರಿಗೆ ಸೋಂಕು ತಗುಲಿದೆ. ಇವರಿಗೆ ಸೋಂಕು ತಗುಲಿದ ಬೆನ್ನಲ್ಲೇ ಶಬರಿಮಲೆಯಲ್ಲಿ ಆತಂಕ ಮನೆ ಮಾಡಿದೆ. ಯಾಕಂದ್ರೆ ಇವರೆಲ್ಲ ಅಯ್ಯಪ್ಪ ಸನ್ನಿಧಾನ, ಪಂಪಾ ಹಾಗೂ ನಿಲಕ್ಕಲ್ ಬೇಸ್ ಕ್ಯಾಂಪ್‌ಗಳಲ್ಲಿ ಕೆಲಸ ಮಾಡಿದ್ದಾರೆ.