ಪತಿ-ಪತ್ನಿ ಜಗಳದಲ್ಲಿ ಮಕ್ಕಳು ಬಡವಾಗ್ತಾರೆ. ವಿಚ್ಛೇದನ ಪಡೆದು ದಂಪತಿ ದೂರವಾಗ್ತಾರೆ. ಆದ್ರೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಮಕ್ಕಳಿಗೆ ಬರುತ್ತದೆ. ಸಾಮಾನ್ಯವಾಗಿ ಮಗು 7 ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿದ್ದರೆ ಮಕ್ಕಳ ಪಾಲನೆ ಹೊಣೆಯನ್ನು ಕೋರ್ಟ್ ತಾಯಿಗೆ ನೀಡುತ್ತದೆ. ಆದ್ರೆ ಮಧ್ಯಪ್ರದೇಶದಲ್ಲಿ ಇಬ್ಬರು ಪುರುಷರು, ತಾಯಿಗಿಂತ ಉತ್ತಮರು ಎಂಬುದನ್ನು ಸಾಭೀತುಪಡಿಸಿದ್ದಾರೆ. ಕೋರ್ಟ್ ಮಕ್ಕಳ ಜವಾಬ್ದಾರಿಯನ್ನು ತಾಯಿ ಬದಲು ತಂದೆಗೆ ನೀಡಿದೆ.
2018ರಲ್ಲಿ ವಿವಾಹವಾಗಿದ್ದ ದಂಪತಿ ಮಧ್ಯೆ ಸಣ್ಣ ವಿಷ್ಯಕ್ಕೆ ಗಲಾಟೆ ನಡೆದಿತ್ತು. ಇಬ್ಬರೂ ದೂರವಾಗಿದ್ದರು. ಮಗು ಕಸ್ಟಡಿ ತನಗೆ ಬೇಕೆಂದು ತಂದೆ ಅರ್ಜಿ ಸಲ್ಲಿಸಿದ್ದ. ತಾಯಿ ಮಗುವಿಗೆ ಹೊಡೆಯುತ್ತಾಳೆಂದು ಆರೋಪ ಮಾಡಿದ್ದ. ಅಲ್ಲದೆ ಇದಕ್ಕೆ ಸಾಕ್ಷ್ಯ ನೀಡಿದ್ದ. ಮಗುವನ್ನು ತಾಯಿಗಿಂತ ಹೆಚ್ಚು ಪ್ರೀತಿಯಿಂದ ತಾನು ಸಾಕುತ್ತೇನೆಂಬುದನ್ನು ತೋರಿಸಿಕೊಟ್ಟ ನಂತ್ರ ಮಗು ಜವಾಬ್ದಾರಿಯನ್ನು ಕೋರ್ಟ್ ತಂದೆಗೆ ನೀಡಿದೆ.
ಇನ್ನೊಂದು ಪ್ರಕರಣದಲ್ಲೂ ಇದೇ ಆಗಿದೆ. 2013ರಲ್ಲಿ ಮದುವೆ ನಡೆದಿತ್ತಂತೆ. ಮೂರು ವರ್ಷಗಳ ಹಿಂದೆ ಮಗು ಜನಿಸಿದೆ. ಆದ್ರೆ ಪತ್ನಿ ವಿವಾಹೇತರ ಸಂಬಂಧ ಹೊಂದಿರುವುದು ಪತಿಗೆ ಗೊತ್ತಾಗಿದೆ. ಪತ್ನಿಯನ್ನು ಸರಿದಾರಿಗೆ ತರಲು ವಿಫಲ ಯತ್ನ ನಡೆಸಿದ್ದಾನೆ. ಆದ್ರೆ ಮನೆ ತೊರೆದ ಪತ್ನಿ, ಮಗುವನ್ನು ತನ್ನ ಜವಾಬ್ದಾರಿಗೆ ನೀಡುವಂತೆ ಕೋರಿದ್ದಳಂತೆ. ಆದ್ರೆ ಪತ್ನಿ, ಮಗುವನ್ನು ಸರಿಯಾಗಿ ನೋಡಿಕೊಳ್ತಿಲ್ಲ ಎಂಬ ಬಗ್ಗೆ ಸಾಕ್ಷ್ಯ ನೀಡಿದ ತಂದೆ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದಾನೆ.