
ಮಗು ಹುಟ್ಟಿದ ಮೇಲೆ ಅವ್ರ ಪಾಲಕರು ಅಥವಾ ಕುಟುಂಬಸ್ಥರಿಂದ ಸರ್ ನೇಮ್ ಬರುತ್ತದೆ. ಆದ್ರೆ ಇದೇ ಸರ್ ನೇಮ್ ಅಸ್ಸಾಂ ಯುವತಿಗೆ ಸಮಸ್ಯೆಯಾಗಿದೆ. ಸರ್ ನೇಮ್ ಕಾರಣಕ್ಕೆ ಆಕೆ ಕೆಲಸ ಕಳೆದುಕೊಂಡಿದ್ದಾಳೆ.
ಗುವಾಹಟಿಯ ನಿವಾಸಿ ಪ್ರಿಯಾಂಕಾ ಅವರು ಸರ್ಕಾರಿ ಕಂಪನಿ ನ್ಯಾಷನಲ್ ಸೀಡ್ ಕಾರ್ಪೊರೇಶನ್ ಲಿಮಿಟೆಡ್ ಗೆ ಉದ್ಯೋಗಕ್ಕಾಗಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದ್ದರು. ಆದರೆ ಚುಟಿಯಾ (Chutia) ಸರ್ ನೇಮ್ ನಿಂದಾಗಿ ವೆಬ್‌ಸೈಟ್ ಮತ್ತು ಸಾಫ್ಟ್ವೇರ್ ಆಕೆಯ ಅರ್ಜಿಯನ್ನು ತಿರಸ್ಕರಿಸಿದೆ.
ಪದೇ ಪದೇ ಕ್ಲಿಕ್ ಮಾಡಿದ್ರೂ ಅರ್ಜಿಯನ್ನು ಸಾಫ್ಟ್ವೇರ್ ಸ್ವೀಕರಿಸಲಿಲ್ಲ. ನಂತ್ರ ಫೇಸ್ಬುಕ್ ನಲ್ಲಿ ಇದ್ರ ಕಾರಣ ಗೊತ್ತಾಗಿದೆ. ಯಾವುದೇ ಸಂದರ್ಶನಕ್ಕೆ ಹೋದ್ರೂ ಆಕೆ ಸರ್ ನೇಮ್ ಕೇಳಿ ಜನರು ನಗ್ತಾರಂತೆ. ಈ ಬಗ್ಗೆ ಫೇಸ್ಬುಕ್ ನಲ್ಲಿ ಮಹಿಳೆ ನೋವು ತೋಡಿಕೊಂಡಿದ್ದಾರೆ. ದೂರಿನ ನಂತ್ರ ಕಂಪನಿ ಅಪ್ಲಿಕೇಷನ್ ಸ್ವೀಕರಿಸಿದೆ. ಅಸ್ಸಾಂನ ಬುಡಕಟ್ಟು ಜನಾಂಗದಲ್ಲಿ ಚುಟಿಯಾ ಮತ್ತು ಸುಟಿಯಾ ಎಂಬ ಎರಡು ಸಮುದಾಯವಿದೆ.