ಮಧ್ಯಪ್ರದೇಶದಲ್ಲಿರುವ ಖಜುರಾಹೊ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಇಲ್ಲಿರುವ ಅಪ್ರತಿಮೆ ಕೆತ್ತನೆಗಳಿಂದ ಅಲಂಕೃತಗೊಂಡಿರುವ ದೇವಾಲಯ ವಿಶ್ವಾದ್ಯಂತ ಹೆಸರು ಪಡೆದಿದೆ.
ಬುಂದೇಲ್ ಖಂಡ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಸಣ್ಣ ಪಟ್ಟಣ ಮಧ್ಯಕಾಲೀನ ಕಾಲದಲ್ಲಿ ಭಾರತೀಯ ವಾಸ್ತುಶಿಲ್ಪ ಮತ್ತು ಅದರ ಸಂಸ್ಕೃತಿಗೆ ಹಿಡಿದ ಉದಾಹರಣೆಯಂತಿದೆ.
ಹಿಂದೂ ಮತ್ತು ಜೈನ ದೇವಾಲಯಗಳ ವಾಸ್ತುಶಿಲ್ಪವು ಪ್ರೀತಿಯ ಸಾಂಗತ್ಯದ ರೂಪಗಳನ್ನು ಚಿತ್ರಿಸಿದೆ. ಗೋಡೆಯ ಮೇಲಿರುವ ಕೆತ್ತನೆಗಳು ಅತ್ಯಂತ ಸುಂದರವಾಗಿದೆ.
ಇದನ್ನು ದಾಳಿಕೋರರು ಹಲವು ಬಾರಿ ನಾಶಪಡಿಸಲು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ ಎಂಬುದು ವಿಶೇಷ. ಇಲ್ಲಿ ಭೇಟಿ ನೀಡಿದರೆ ವಾಸ್ತುಶಿಲ್ಪದ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದು.