ಭಾರತೀಯ ವಾಯುಪಡೆಯ ಅಂಬಾಲದ 17ನೇ ಸ್ಕ್ವಾಡ್ರನ್ ನಲ್ಲಿ ಈಗಾಗಲೇ 11 ರಫೇಲ್ ಯುದ್ಧ ವಿಮಾನಗಳು ಸನ್ನದ್ಧ ಸ್ಥಿತಿಯಲ್ಲಿದ್ದು, ಇದೀಗ ಮುಂದಿನ ತಿಂಗಳ ಅಂತ್ಯದೊಳಗೆ ಮತ್ತೆ 10 ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಭಾರತಕ್ಕೆ ಬಂದಿಳಿಯಲಿವೆ ಎಂದು ಹೇಳಲಾಗಿದೆ.
ಮೂರು ವಿಮಾನಗಳು ಇನ್ನೆರಡು ದಿನಗಳಲ್ಲಿ ಬರಲಿದ್ದು, ಉಳಿದ ಎಂಟು ವಿಮಾನಗಳು ಏಪ್ರಿಲ್ ಎರಡನೇ ವಾರದ ಬಳಿಕ ಭಾರತಕ್ಕೆ ಬರಲಿವೆ ಎಂದು ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ 11 ವಿಮಾನಗಳ ಸೇರ್ಪಡೆಯಿಂದ ವಾಯುಪಡೆಯ ರಫೇಲ್ ಯುದ್ಧ ವಿಮಾನಗಳ ಸಂಖ್ಯೆ 21ಕ್ಕೆ ಏರಿಕೆಯಾಗಲಿದೆ.
ಈಸ್ಟರ್ ಪವಿತ್ರ ವಾರದ ಮೊದಲ ದಿನವೇ ಘೋರ ಕೃತ್ಯ: ಚರ್ಚ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 14 ಮಂದಿ ಗಂಭೀರ ಗಾಯ
ಭಾರತ ಸರ್ಕಾರ ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಹಂತಹಂತವಾಗಿ ಈ ವಿಮಾನಗಳು ಭಾರತಕ್ಕೆ ಆಗಮಿಸುತ್ತಿವೆ. ವಾಯುಪಡೆಗೆ ರಫೇಲ್ ಯುದ್ಧ ವಿಮಾನಗಳ ಸೇರ್ಪಡೆಯಿಂದ ವಾಯುಪಡೆಯ ಸಮರ ಶಕ್ತಿ ಮತ್ತಷ್ಟು ಹೆಚ್ಚಿದೆ.