ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆಗಳಲ್ಲಿ ಒಂದು ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ನಿರ್ಮಾಣ. ಈ ಸುರಂಗ ಮಾರ್ಗದ ಲೋಕಾರ್ಪಣೆ ಇಂದು ನಡೆದಿದೆ. ಹಿಮಾಚಲಪ್ರದೇಶದ ರೋಹ್ಟಂಗ್‌ನಲ್ಲಿ ನಿರ್ಮಾಣವಾಗಿರುವ ಅಟಲ್ ಸುರಂಗ ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. 19 ವರ್ಷಗಳಿಂದ ಈ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿತ್ತು. 2002 ರಿಂದ ಈ ಸುರಂಗ ಮಾರ್ಗ ಕಾಮಗಾರಿ ಪ್ರಾರಂಭವಾಗಿದ್ದು ಈ ವರ್ಷ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ.
ಈ ಸುರಂಗ ಮಾರ್ಗದಲ್ಲಿ ಚಲಿಸಿದರೆ ಮನಾಲಿ ಮತ್ತು ಲೇಹ್ ನಡುವೆ 46 ಕಿ.ಮೀ. ಕಡಿಮೆ ಆಗಲಿದೆ. 9.2 ಕಿ.ಮೀ ಉದ್ದವಿರುವ ಈ ಸುರಂಗದಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಈ ಸಿಸಿ ಟಿವಿಗಳು ಪ್ರತಿ 250 ಮೀಟರ್ ಗಳಿಗೆ ಅಳವಡಿಸಲಾಗಿದೆ. ಇನ್ನು ಸುರಂಗದ ಒಳಗೆ ಪ್ರತಿ 500 ಮೀಟರ್‌ಗೆ ತುರ್ತು ನಿರ್ಗಮನ ಬಾಗಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಅಗ್ನಿ ಅನಾಹುತಗಳ ಮುನ್ನೆಚ್ಚರಿಕೆಯಿಂದ ಫೈರ್ ಹೈಡ್ರಾಂಟ್ಸ್ ಅಳವಡಿಸಲಾಗಿದೆ.
ಈ ಸುರಂಗದ ಎರಡು ಕಡೆ 1 ಮೀಟರ್‌ನಷ್ಟು ಫುಟ್‌ಪಾತ್ ಇದೆ. ಈ ಸುರಂಗದಲ್ಲಿ ಸುಮಾರು 3 ಸಾವಿರ ಕಾರುಗಳು ಸಂಚಾರ ಮಾಡಬಹುದು. ಇನ್ನು ಈ ಸುರಂಗದ ಒಟ್ಟು ಖರ್ಚು 3500 ಕೋಟಿ ರೂಪಾಯಿಗಳು. ಈ ಸುರಂಗವು ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದೆ.