ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ರಾಖಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಲತಾ ಮಂಗೇಶ್ಕರ್,ಈ ವರ್ಷ ಪಿಎಂ ಮೋದಿಗೆ ರಾಖಿಯನ್ನು ಏಕೆ ಕಳುಹಿಸಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು. ಹಾಗೆ ಒಂದು ಭರವಸೆ ಈಡೇರಿಸುವಂತೆ ಮೋದಿಗೆ ಲತಾ ವಿನಂತಿ ಮಾಡಿದ್ದಾರೆ.
ರಾಖಿಯ ಶುಭ ಸಂದರ್ಭದಲ್ಲಿ ದೇಶದ ಅನೇಕ ಸಹೋದರಿಯರು ನಿಮ್ಮ ಕೈಗೆ ರಾಖಿ ಕಟ್ಟಲು ಬಯಸಿದ್ದರು. ಆದ್ರೆ ಯಾರಿಗೂ ರಾಖಿ ಕಟ್ಟಲು ಸಾಧ್ಯವಾಗ್ತಿಲ್ಲ. ಅದು ಏಕೆ ಎಂಬುದು ನಿಮಗೆ ಗೊತ್ತು. ನೀವು ದೇಶಕ್ಕಾಗಿ ಸಾಕಷ್ಟು ಮಾಡ್ತಿದ್ದೀರಿ. ನಿಮ್ಮ ಕೆಲಸವನ್ನು ದೇಶವಾಸಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ನೀವು ಭಾರತವನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುವಿರೆಂಬ ಆಶ್ವಾಸನೆ ನೀಡಿ ಎಂದು ಲತಾ ಹೇಳಿದ್ದಾರೆ.
ಲತಾ ಮಂಗೇಶ್ಕರ್ ಟ್ವಿಟರ್ ಗೆ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಲತಾ ದೀದಿ, ರಕ್ಷಾ ಬಂಧನದ ಈ ಶುಭ ಸಂದರ್ಭದಲ್ಲಿ, ನಿಮ್ಮ ಈ ಭಾವಪೂರ್ಣ ಸಂದೇಶವು ಅಪಾರ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತದೆ. ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದದಿಂದ, ನಮ್ಮ ದೇಶವು ಹೊಸ ಎತ್ತರವನ್ನು ಮುಟ್ಟುತ್ತದೆ ಮತ್ತು ಹೊಸ ಯಶಸ್ಸನ್ನು ಸಾಧಿಸುತ್ತದೆ. ನೀವು ಆರೋಗ್ಯವಾಗಿರಿ ಮತ್ತು ದೀರ್ಘಕಾಲ ಬದುಕಲಿ, ಇದು ದೇವರಿಗೆ ನನ್ನ ಪ್ರಾರ್ಥನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.