ಕೊರೊನಾ ವೈರಸ್ ಸಂಕಟ ಉದ್ಯೋಗದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲವರಿಗೆ ಸಂಬಳ ಸಿಗ್ತಿಲ್ಲ. ಇದ್ರ ಮಧ್ಯೆ ಅನೇಕ ಕಂಪನಿಗಳ ನೇಮಕಾತಿಯನ್ನು ನಿಲ್ಲಿಸಿವೆ. ಇದ್ರಲ್ಲಿ ರೈಲ್ವೆ ಕೂಡ ಹೊರತಾಗಿಲ್ಲ.
ರೈಲ್ವೆ ಇಲಾಖೆ ತನ್ನ ನೇಮಕಾತಿ ನಿಲ್ಲಿಸಿದೆ. ಭದ್ರತೆ ಕ್ಷೇತ್ರ ಬಿಟ್ಟು ರೈಲ್ವೆ ಇಲಾಖೆ ಎಲ್ಲ ಹುದ್ದೆಗಳ ನೇಮಕವನ್ನು ಸದ್ಯ ರದ್ದು ಮಾಡಿದೆ. ಸೇಪ್ಟಿ ಹೊರತುಪಡಿಸಿ ಬೇರೆ ಯಾವುದೇ ಹುದ್ದೆಗಳ ನೇಮಕಾತಿ ನಡೆಯುವುದಿಲ್ಲ.
ರೈಲ್ವೆ ಇಲಾಖೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದೆ. ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, ಕಳೆದ 2 ವರ್ಷಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಪರಿಶೀಲಿಸಲಾಗುವುದು ಎಂದಿದೆ.