alex Certify ರೈಲಿನಲ್ಲಿ ಭಿಕ್ಷೆ ಬೇಡುವುದು, ಧೂಮಪಾನಕ್ಕೆ ಆಗಲ್ಲ ಜೈಲು ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಭಿಕ್ಷೆ ಬೇಡುವುದು, ಧೂಮಪಾನಕ್ಕೆ ಆಗಲ್ಲ ಜೈಲು ಶಿಕ್ಷೆ

ರೈಲ್ವೆ ಇಲಾಖೆ ತನ್ನ ಹಳೆ ಕಾನೂನಿನಲ್ಲಿ ಬದಲಾವಣೆ ತರುವ  ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಮೂಲಗಳ ಪ್ರಕಾರ, ರೈಲ್ವೆ ಕ್ಯಾಬಿನೆಟ್ ಗೆ ಕಳುಹಿಸಿದ ಪ್ರಸ್ತಾಪವು ಭಾರತೀಯ ರೈಲ್ವೆ ಕಾಯ್ದೆ 1989 ರ ಎರಡು ಕಾನೂನುಗಳನ್ನು ಬದಲಾಯಿಸುವ ಪ್ರಸ್ತಾಪವನ್ನು ಒಳಗೊಂಡಿದೆ.

ಪ್ರಸ್ತಾವನೆಯ ಪ್ರಕಾರ, ಐಆರ್ಎಯ ಸೆಕ್ಷನ್ 144 (2) ಯನ್ನು ತಿದ್ದುಪಡಿ ಮಾಡುವಂತೆ ಕೋರಲಾಗಿದೆ. ಇದಕ್ಕೆ ಒಪ್ಪಿಗೆ ಸಿಕ್ಕಿದ್ರೆ ರೈಲು, ರೈಲ್ವೆ ಪ್ಲಾಟ್‌ಫಾರ್ಮ್ ಅಥವಾ ನಿಲ್ದಾಣದ ಆವರಣದಲ್ಲಿ ಭಿಕ್ಷೆ ಬೇಡುವುದು ಅಪರಾಧವಾಗುವುದಿಲ್ಲ.

ಇದಲ್ಲದೆ, ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 167 ಅನ್ನು ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಕಳುಹಿಸಲಾಗಿದೆ. ಈ ತಿದ್ದುಪಡಿಗಳನ್ನು ಅಂಗೀಕರಿಸಿದರೆ, ರೈಲು, ರೈಲ್ವೆ ಪ್ಲಾಟ್‌ಫಾರ್ಮ್ ಅಥವಾ ನಿಲ್ದಾಣದ ಆವರಣದಲ್ಲಿ ಧೂಮಪಾನ ಮಾಡುವವರಿಗೆ ಜೈಲು ಶಿಕ್ಷೆ ವಿಧಿಸಲಾಗುವುದಿಲ್ಲ. ಅವರಿಂದ  ದಂಡ ವಸೂಲಿ ಮಾಡಲಾಗುವುದು.

ಮೂಲಗಳ ಪ್ರಕಾರ, ಇನ್ನು ಮುಂದೆ ಉಪಯುಕ್ತವಲ್ಲದ ಇಂತಹ ಅನೇಕ ಕಾನೂನುಗಳನ್ನು ಬದಲಾಯಿಸಲು ಅಥವಾ ರದ್ದುಗೊಳಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...