ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆತ್ಮಚರಿತ್ರೆ ಎ ಪ್ರಾಮಿಸ್ಡ್ ಲ್ಯಾಂಡ್ ಪುಸ್ತಕದಲ್ಲಿ ಭಾರತದ ಇಬ್ಬರು ರಾಜಕೀಯ ವ್ಯಕ್ತಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಸಂಸದ ರಾಹುಲ್ ಗಾಂಧಿ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಒತ್ತಡದಲ್ಲಿದ್ದವಂತೆ ಕಾಣುತ್ತಾರೆ. ವಿಷಯದ ಪರಿಣತಿಯ ಕೊರತೆಯಿದೆ. ಅವರಲ್ಲಿ ತಮ್ಮ ಗುಣಾವಗುಣಗಳ ಬಗ್ಗೆ ಜ್ಞಾನ ಕಡಿಮೆ. ಪ್ರಭಾವ ಬೀರಲು ಉತ್ಸುಕರಾಗಿದ್ದಾರೆ. ಆದರೆ ಅಷ್ಟು ಪ್ರಬುದ್ಧರಾಗಿದ್ದಂತಿಲ್ಲ, ವಿದ್ಯಾರ್ಥಿಯೊಬ್ಬ ತನಗೆ ನೀಡಿರುವ ಪಾಠವನ್ನು ಅಚ್ಚುಕಟ್ಟಾಗಿ ಮುಗಿಸಿ ಶಿಕ್ಷಕನನ್ನು ಮೆಚ್ಚಿಸಲು ಯತ್ನಿಸುವ ವಿದ್ಯಾರ್ಥಿಯಂತೆ ರಾಹುಲ್ ಭಾಸವಾಗುತ್ತಾರೆ ಎಂದು ಕಟುವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಡಾ.ಮನಮೋಹನ್ ಸಿಂಗ್ ಬಗ್ಗೆ ನೆನಪಿಸಿಕೊಂಡಿರುವ ಒಬಾಮ, ಮನಮೋಹನ್ ಸಿಂಗ್ ಓರ್ವ ಭಾವಪೂರ್ಣ, ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಅಮೆರಿಕಾ ಮಾಜಿ ಅಧ್ಯಕ್ಷ ಒಬಾಮ ತಮ್ಮ ಪುಸ್ತಕದಲ್ಲಿ ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವುದು ರಾಹುಲ್ ಗಾಂಧಿಗೆ ತೀವ್ರ ಇರಿಸುಮುರುಸು ಉಂಟುಮಾಡುವಂತಾಗಿದೆ. ಒಬಾಮ ಪುಸ್ತಕದಲ್ಲಿ ರಾಹುಲ್ ಕುರಿತು ಉಲ್ಲೇಖ ಇದೀಗ ಟ್ವಿಟರ್ ಟ್ರೆಂಡ್ ಆಗಿ ಪರಿಣಮಿಸಿದೆ.