ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಇಡೀ ಭಾರತೀಯರ ಕನಸು. ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ನಂತ್ರ ಮಂದಿರ ನಿರ್ಮಾಣ ಕೆಲಸ ಶುರುವಾಗಿದೆ. ಇದಕ್ಕೆ ದೇಶದಾದ್ಯಂತ ಆರ್ಥಿಕ ಸಹಾಯ ಹರಿದು ಬರ್ತಿದೆ. ಭಾರತದ ಮಾಜಿ ಓಪನರ್ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.
ಗೌತಮ್ ಗಂಭೀರ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣ ನಮ್ಮೆಲ್ಲರ ಕನಸು. ಇದಕ್ಕಾಗಿ ನಾನು ನನ್ನ ಕುಟುಂಬ ಸಣ್ಣ ಕೊಡುಗೆ ನೀಡಿದ್ದೇವೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ದೆಹಲಿ ಬಿಜೆಪಿ ದೇಣಿಗೆ ಸಂಗ್ರಹಿಸಲು ಕೂಪನ್ ನೀಡುತ್ತಿದೆ. 10 ರೂಪಾಯಿಯಿಂದ 100, 1000 ರೂಪಾಯಿ ಕೂಪನ್ ಸೇರಿದೆ.
ಗೌತಮ್ ಗಂಭೀರ್ ಮಾತ್ರವಲ್ಲ ದೇಶದ ಅನೇಕ ಗಣ್ಯರು, ಜನಸಾಮಾನ್ಯರು ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡುತ್ತಿದ್ದಾರೆ. ವಿವಿಧ ರೂಪದಲ್ಲಿ ದೇಣಿಗೆ ರಾಮ ಮಂದಿರ ಟ್ರಸ್ಟ್ ಗೆ ಹರಿದು ಬರ್ತಿದೆ.