ದೇಶಕ್ಕೆ ಕೊರೊನಾ ಕಾಲಿಟ್ಟ ಬಳಿಕ ಸಾರ್ವಜನಿಕರ ಜೀವನ ವಿಧಾನವೇ ಬದಲಾಗಿಹೋಗಿದೆ. ಕೊರೊನಾಗೆ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಅದರೊಂದಿಗೆ ಬದುಕು ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಕೊರೊನಾ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಅದರಲ್ಲೂ ಬಂಧು ಬಾಂಧವರೊಂದಿಗೆ ಸಂಭ್ರಮಿಸಬೇಕಾದ ವಿವಾಹ ಸಮಾರಂಭ ಕೊರೊನಾ ಕಾರಣಕ್ಕೆ ಯಾಂತ್ರೀಕೃತವಾಗಿದೆ. ಕರ್ನಾಟಕದಲ್ಲಿ ವಿವಾಹ ಸಮಾರಂಭದಲ್ಲಿ ಕೇವಲ ಐವತ್ತು ಮಂದಿ ಮಾತ್ರ ಭಾಗವಹಿಸಬೇಕೆಂಬ ನಿಯಮವಿದ್ದರೆ ಕೇರಳದಲ್ಲಿ ಸದ್ಯಕ್ಕೆ ಮದುವೆಗಳಿಗೆ ಅವಕಾಶವಿಲ್ಲವೆನ್ನಲಾಗಿದೆ.
ಹೀಗಾಗಿ ಕೇರಳ ಮೂಲದ ವರ ಮತ್ತು ಕರ್ನಾಟಕದ ಶಿವಮೊಗ್ಗ ಮೂಲದ ವಧು, ಕೇರಳ ಗಡಿಗೆ ಹೊಂದಿಕೊಂಡಿರುವ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ಪೋಸ್ಟ್ ಸಮೀಪದ ರಸ್ತೆಬದಿಯಲ್ಲಿ ಹಾರ ಬದಲಿಸಿಕೊಂಡು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬಳಿಕ ಈ ಜೋಡಿ ಕೇರಳಕ್ಕೆ ವಾಪಸಾದ ನಂತರ ಹೋಂ ಕ್ವಾರಂಟೈನ್ ಗೆ ಒಳಪಟ್ಟಿದೆ ಎನ್ನಲಾಗಿದೆ.