ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನಕ್ಕೆ ಬೆಂಗಳೂರಿನಿಂದ ಹೋಗಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. ರಾತ್ರಿ ಬೆಳಗಾಗುವುದರೊಳಗೆ ಮಗು ಜೊತೆ ಪತಿ ನಾಪತ್ತೆಯಾಗಿದ್ದಾನೆ. ಪತ್ನಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಮೂಲತಃ ರಷ್ಯಾ ಮೂಲದ ನಾಡಿಯಾ, ಏಳು ವರ್ಷಗಳ ಹಿಂದೆ ಬೆಂಗಳೂರು ನಿವಾಸಿ ಮಹೇಶ್ ನನ್ನು ವಿವಾಹವಾಗಿದ್ದಾಳೆ. ಅವರಿಗೆ ಒಂದು ಮಗು ಕೂಡ ಇದೆ. ಕೆಲವು ದಿನಗಳಿಂದ ಕುಟುಂಬದಲ್ಲಿ ಗಲಾಟೆ ನಡೆಯುತ್ತಿದ್ದ ಕಾರಣ ಪತಿ ಮಹೇಶ್, ಮಗು ಮತ್ತು ಪತ್ನಿ ಜೊತೆ ವೃಂದಾವನಕ್ಕೆ ಬಂದಿದ್ದಾನೆ.
ಅಲ್ಲಿ ಗೆಸ್ಟ್ ಹೌಸ್ ಒಂದರಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆದಿದ್ದಾರೆ. ರಾತ್ರಿಯಿದ್ದ ಗಂಡ ಬೆಳಿಗ್ಗೆ ಇರಲಿಲ್ಲ. ಮಗು ಕೂಡ ಕಾಣಿಸಲಿಲ್ಲ. ಸ್ವಲ್ಪ ಸಮಯ ಕಾದ ಪತ್ನಿ ನಂತ್ರ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಮೇಲೆ ಇಬ್ಬರ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.