ಚೆನ್ನೈ: ಕಾಲಿವುಡ್ ದಿಗ್ಗಜರಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್, ಅವರಿಬ್ಬರೂ ರಾಜಕೀಯದಲ್ಲಿ ಲೆಕ್ಕಕ್ಕಿಲ್ಲದ ಆಟಗಾರರು ಎಂದು ವ್ಯಂಗ್ಯವಾಡಿದ್ದಾರೆ.
ರಜನಿ ಹಾಗೂ ಕಮಲ್ ಸಿನಿಮಾದಲ್ಲಿ ಜನರನ್ನು ಆಕರ್ಷಿಸಿದಂತೆ ರಾಜಕೀಯದಲ್ಲಿ ಸಾರ್ವಜನಿಕರನ್ನು ಆಕರ್ಷಿಸಲು ಸಾಧ್ಯವಿಲ್ಲ. ಅವರಿಬ್ಬರೂ ರಾಜಕೀಯದಲ್ಲಿರಲಿ ಇಲ್ಲದಿರಲಿ ಚುನಾವಣೆಯ ಮೇಲೆ ಯಾವುದೇ ರೀತಿ ಪರಿಣಾಮಗಳು ಬೀರುವುದಿಲ್ಲ ಎಂದು ಟೀಕಿಸಿದ್ದಾರೆ.
ಎಂಜಿಆರ್, ಗಣೇಶನ್ ಹಾಗೂ ಜಯಲಲಿತಾ ಅವರ ರಾಜಕೀಯ ಪ್ರವೇಶದ ಸಂದರ್ಭ ಬೇರೆಯಾಗಿತ್ತು. ಅಲ್ಲದೇ ಅವರು ಅಭಿನಯಿಸುತ್ತಿದ್ದ ಸಿನಿಮಾಗಳು ಕ್ರಾಂತಿಕಾರಿಯಾಗಿ ಹಾಗೂ ಸಾಮಾಜಿಕ ಸಂದೇಶ ನೀಡುವ ಚಿತ್ರಗಳಾಗಿದ್ದವು. ಆದರೆ ಈಗ ಸಂದರ್ಭ ಬದಲಾಗಿದೆ. ಇನ್ನು ರಜನಿಕಾಂತ್ ರಾಜಕೀಯಕ್ಕೆ ಬರುವುದಾಗಿ ಹೇಳಿದಾಗಲೂ ಯಾವುದೇ ಬದಲಾವಣೆಯಾಗಲ್ಲ ಎಂದಿದ್ದೆ. ಈಗ ಅವರು ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಈಗಲೂ ಯಾವುದೇ ವ್ಯತ್ಯಾಸವಾಗಲ್ಲ ಎಂದು ಹೇಳುತ್ತಿದ್ದೇನೆ ಎಂದರು.